Home News ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಂದ ರಕ್ತದಾನ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಂದ ರಕ್ತದಾನ

0

ಭಾರತೀಯ ರೆಡ್‌ಕ್ರಾಸ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್‌ನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಸೇರಿದಂತೆ ಸುಮಾರು 65 ಶಿಕ್ಷಕರು ರಕ್ತದಾನ ಮಾಡಿದರು. ಆದರೆ ಸುಮಾರು 1700 ಮಂದಿ ತಾಲ್ಲೂಕಿನ ಶಿಕ್ಷಕರಲ್ಲಿ ಕೇವಲ 65 ಮಂದಿ ರಕ್ತದಾನ ಮಾಡಿದ್ದು ವಿಪರ್ಯಾಸವಾಗಿತ್ತು.