Home News ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ನಗರದ ವಾಸವಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ವಿಜೇತರಾಗಿ ಬಾಗಲಕೋಟೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮುಖೇಶ್‌, ಗುಂಡು ಎಸೆತ ಮತ್ತು ಉದ್ದಜಿಗಿತ (ಪ್ರಥಮ), ಕೌಶಿಕ್‌, ಎತ್ತರ ಜಿಗಿತ (ಪ್ರಥಮ), ಯಶ್ವಂತ್‌ 400 ಮೀಟರ್‌ (ಪ್ರಥಮ), ಅರುಣ್‌ಕುಮಾರ್‌, 800 ಮೀಟರ್‌ (ತೃತೀಯ), ವೇದ, ಉದ್ದಜಿಗಿತ (ತೃತೀಯ) ಮತ್ತು ರಿಲೇ ವಿಜೇತರಾದ ಚಂದನ್‌, ಯಶ್ವಂತ್‌, ಪವನ್‌, ವಿನಯ್‌ ಅವರನ್ನು ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.