Home News ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಶಿಡ್ಲಘಟ್ಟದ ಕ್ರೀಡಾಪಟುಗಳು

ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಶಿಡ್ಲಘಟ್ಟದ ಕ್ರೀಡಾಪಟುಗಳು

0

ನಗರದ ಆರು ಮಂದಿ ಕ್ರೀಡಾಪಟುಗಳು ಬೀದರ್ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಎರಡನೇ ಅಮೆಚ್ಯೂರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಹದಿನಾಲ್ಕು ವರ್ಷದೊಳಗಿನವರಲ್ಲಿ ಚೈತನ್ಯ(100, 200 ಮತ್ತು 400 ಮೀಟರ್ ಓಟ), ಎಸ್.ಮೋಹಿತ್ನಾಯಕ್(200, 400 ಮೀಟರ್ ಓಟ), ಮುಖೇಶ್(ಶಾಟ್ಪುಟ್ ಮತ್ತು ಡಿಸ್ಕಸ್ ಥ್ರೋ), ಮನೋಜ್(200, 400 ಮೀಟರ್ ಓಟ), ಭಾನುಚಂದರ್(100, 200 ಮೀಟರ್ ಓಟ); ಹದಿನಾರು ವರ್ಷದೊಳಗಿನವರಲ್ಲಿ ಮಾದೇಶ(200, 400 ಮೀಟರ್ ಓಟ, ಲಾಂಗ್ಜಂಪ್) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳನ್ನು ಗುರುತಿಸಿ ಉಚಿತವಾಗಿ ಅವರಿಗೆ ಪ್ರತಿ ದಿನ ನಗರದ ನೆಹರೂ ಕ್ರೀಡಾಂಗಣದಲ್ಲಿ ತರಬೇತಿ ನೀಡುತ್ತಿರುವ ಕ್ರೀಡಾ ತರಬೇತುದಾರ ಎಂ.ಮುನಿರಾಜು, ‘ನವೆಂಬರ್ 5,6 ಮತ್ತು 7 ರಂದು ಬೀದರ್ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳು ಆಯ್ಕೆಯಾಗಿರುವುದು ಖುಷಿ ತಂದಿದೆ. ನಮ್ಮಲ್ಲಿನ ಪ್ರತಿಭೆಗಳು ರಾಷ್ಟ್ರಮಟ್ಟಕ್ಕೂ ಹೋಗಬೇಕೆಂಬ ಅಭಿಲಾಷೆಯಿದೆ. ಮಕ್ಕಳೊಂದಿಗೆ ಜಿಲ್ಲಾ ವ್ಯವಸ್ಥಾಪಕ ರಾಜಶೇಖರ್ ತೆರಳುತ್ತಿದ್ದಾರೆ’ ಎಂದು ಹೇಳಿದರು.