Home News ಮಕ್ಕಳ ಜೊತೆ ಪ್ರಧಾನಿ ಸಂವಾದ

ಮಕ್ಕಳ ಜೊತೆ ಪ್ರಧಾನಿ ಸಂವಾದ

0

ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದವನ್ನು ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ದೂರದರ್ಶನದಲ್ಲಿ ಮಕ್ಕಳು ವೀಕ್ಷಿಸಿದರು.
ಇತ್ತೀಚೆಗೆ ಜಪಾನ್‌ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ಅಲ್ಲಿ ತಮ್ಮ ಶಾಲೆಯನ್ನು ಶುಚಿಗೊಳಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಹೇಳಿದ್ದು ಮತ್ತು ಪರಿಸರ ಕಾಳಜಿಯ ಬಗ್ಗೆ ಇಷ್ಟವಾಯಿತು ಎಂದು ಕ್ರೆಸೆಂಟ್‌ ಶಾಲೆಯ ಸುನೀತಾ ರಾವಲ್‌ ಹೇಳಿದರೆ, ವಿದ್ಯುತ್‌ ಮತ್ತು ನೀರಿನ ಉಳಿತಾಯದ ಬಗ್ಗೆ ಹೇಳಿದ್ದು ಮತ್ತು ನಿರುದ್ಯೋಗ ನಿವಾರಣೆಗಾಗಿ ಕೌಶಲ್ಯ ಅಭಿವೃದ್ಧಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಕ್ರೆಸೆಂಟ್‌ ಶಾಲೆಯ ವಿದ್ಯಾರ್ಥಿ ಮೊಹಮ್ಮದ್‌ ಜಾಯಿದ್‌ ಮೆಚ್ಚಿದರು.
‘ಇದೊಂದು ವಿನೂತನ ಪ್ರಯೋಗ. ಮಕ್ಕಳಿಗೆ ಪ್ರಧಾನಿಯೊಂದಿಗೆ ಮಾತನಾಡಬಹುದು ಎಂಬ ಸಂಗತಿಯೇ ಅವರಲ್ಲಿ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಉತ್ತಮ ಶಿಕ್ಷಕರಾಗಲು ಅವರು ಕರೆ ನೀಡಿದ್ದು ಮಹತ್ವದ್ದಾಗಿತ್ತು. ಆಸಕ್ತಿಕರವಾಗಿದ್ದ ಈ ಕಾರ್ಯಕ್ರಮ ಮಕ್ಕಳನ್ನು ಆಲೋಚನೆಗೆ ಹಚ್ಚಿತು’ ಎಂದು ಕ್ರೆಸೆಂಟ್‌ ಶಾಲೆಯ ಮುಖ್ಯಶಿಕ್ಷಕ ತಮೀಮ್‌ಪಾಷ ತಿಳಿಸಿದರು.