ಭರತನಾಟ್ಯದಂತಹ ದಕ್ಷಿಣ ಭಾರತದ ಪಾರಂಪರಿಕ ನೃತ್ಯ ಕಲೆಯನ್ನು ತಾಲ್ಲೂಕಿನ ಮಟ್ಟದ್ಲಲಿ ಕಲಿಸಲು ಮತ್ತು ಪ್ರೋತ್ಸಾಹಲು ಸೂಕ್ತ ಮಾರ್ಗದರ್ಶಕರು ಹಾಗೂ ವೇದಿಕೆಗಳ ಕೊರತೆಯಿದೆ. ಆದರೂ ಆಸಕ್ತ ಪ್ರತಿಭೆಗಳು ಹಾಗೂ ಕಲೆಗಾಗಿ ತುಡಿಯುವವರು ಎಲ್ಲ ಕಷ್ಟಗಳನ್ನೂ ಮೀರಿ ತಮ್ಮ ಗುರಿ ಸಾಧಿಸುವುದುಂಟು. ಅಂಥಹ ಪ್ರತಿಭೆ ನಗರದ ದೇಶದಪೇಟೆಯ ಎಂ.ರಕ್ಷಾ.
ಚಿಕ್ಕ ಪ್ರಾಯಲ್ಲೇ ಭರತನಾಟ್ಯ ರಂಗಪ್ರವೇಶ ಮಾಡಿದ ಇವರು ಭರತನಾಟ್ಯದ ಜ್ಯೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದ್ದಿದಾರೆ. ಪ್ರಸ್ತುತ ಎಂಜಿನಿಯರಿಂಗ್ ಓದುತ್ತಿರುವ ಇವರು ಓದಿನ್ಲಲೂ ಪ್ರಥಮರಾಗಿದ್ದಾರೆ.
ಎಲ್ಲ ಮಕ್ಕಳಿಗೂ ಶನಿವಾರ ಮತ್ತು ಭಾನುವಾರವೆಂದರೆ ಆಡುವ ಮತ್ತು ನಲಿಯುವ ದಿನಗಳು. ಆದರೆ ಇವರಿಗೆ ಅದು ಭರತನಾಟ್ಯದ ಕಲಿಕಾ ದಿನಗಳು. ಶನಿವಾರ ಮತ್ತು ಭಾನುವಾರ ಬೆಂಗಳೂರಿಗೆ ಹೋಗಿ ನಾಟ್ಯ ಭರತನಾಟ್ಯದ ಅಭ್ಯಾಸ ಮಾಡುತ್ತಾರೆ. ಇತರೆ ಮಕ್ಕಳಂತೆ ಆಡಿ ನಲಿಯುವ ಸಮಯವನ್ನು ಗುರಿ ಸಾಧನೆಗಾಗಿ ಮೀಸಲಿಟ್ಟಿದ್ದರ ಫಲ ಈಗ ಸಿಕ್ಕಿದೆ.
‘ಸಣ್ಣ ವಯಸ್ಸಿನಲ್ಲಿಯೇ ಇವಳು ತನ್ನ ದೇಹವನ್ನು ಸುಲಲಿತವಾಗಿ ಬಗ್ಗಿಸಬಲ್ಲಳು ಎಂದು ಕಂಡುಕೊಂಡೆ. ಹಾಗಾಗಿ ಮೂರನೇ ತರಗತಿ ಓದುವಾಗಲೇ ನಾಟ್ಯ ಕಲಿಯಲು ನಗರದ ಮಯೂರಿ ನಾಟ್ಯ ಕಲಾ ಕೇಂದ್ರದ ಭಾಗ್ಯಲಕ್ಷ್ಮಿ ಐಯ್ಯರ್ ಅವರ ಬಳಿ ಸೇರಿಸಿದೆವು. ಅವರು ಇವಳಲ್ಲಿ ಪ್ರತಿಭೆಯಿದೆ ಎಂದು ಬೆಂಗಳೂರಿನ ನಾಟ್ಯ ವಿದೂಷಿ ಫ್ರೊ.ಜಯಾ ಅವರಿಗೆ ಪರಿಚಯಿಸಿ ಪ್ರೋತ್ಸಾಹಿಸಿದರು. ನಂತರ ಪವನ್ ಅವರ ಬಳಿ ಕಲಿಯಲು ಪ್ರಾರಮಭಿಸಿದಳು. ನಮ್ಮ ತಾಲ್ಲೂಕಿನಲ್ಲೇ ಪ್ರಥಮವಾಗಿ ಭರತನಾಟ್ಯ ರಂಗಪ್ರವೇಶ ಮಾಡಿರುವ ಇವಳ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ’ ಎಂದು ತಾಯಿ ಎಸ್.ಪುಷ್ಪಲತಾ ತಿಳಿಸಿದರು.
‘ನನಗೆ ಚಿಕ್ಕಂದಿನಿಂದಲೂ ನೃತ್ಯದಲ್ಲಿ ಆಸಕ್ತಿಯಿತ್ತು. ಕುಟುಂಬದವರು ಮತ್ತು ಗುರುಗಳು ಪ್ರೋತ್ಸಾಹಿಸಿದರು. ಹಾಗಾಗಿ ಇಷ್ಟು ಸಾಧಿಸಲು ಸಾಧ್ಯವಾಯಿತು. ನಮ್ಮ ಗುರುಗಳಂತೆ ನಾನೂ ಭರತನಾಟ್ಯದಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆಯಿದೆ’ ಎನ್ನುತ್ತಾರೆ ಎಂ.ರಕ್ಷಾ.
- Advertisement -
- Advertisement -
- Advertisement -
- Advertisement -