Home News ದಿಬ್ಬೂರಹಳ್ಳಿ ಪೋಲೀಸ್‌ಠಾಣೆಗೆ ಮುತ್ತಿಗೆ

ದಿಬ್ಬೂರಹಳ್ಳಿ ಪೋಲೀಸ್‌ಠಾಣೆಗೆ ಮುತ್ತಿಗೆ

0

ಯಾವುದೇ ಜಾತಿ ನಿಂದನೆ(ಅಟ್ರಾಸಿಟಿ) ದೂರುಗಳನ್ನು ಪೋಲೀಸರು ಸೂಕ್ತ ತನಿಖೆ ನಡೆಸಿದ ನಂತರವೆ ಪ್ರಕರಣಗಳನ್ನು ದಾಖಲು ಮಾಡುವಂತೆ ಒತ್ತಾಯಿಸಿ ಸವರ್ಣಿಯರು, ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಯುವಸೇನೆ ನೇತೃತ್ವದಲ್ಲಿ ದಿಬ್ಬೂರಹಳ್ಳಿ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಭಾನುವಾರ ಪ್ರತಿಭಟಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೋಲೀಸ್‌ಠಾಣೆಗೆ ಭಾನುವಾರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಯುವಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ನಾರಾಯಣಸ್ವಾಮಿ ಮಾತನಾಡಿದರು
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೋಲೀಸ್‌ಠಾಣೆಗೆ ಭಾನುವಾರ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಯುವಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ನಾರಾಯಣಸ್ವಾಮಿ ಮಾತನಾಡಿದರು
ಇತ್ತೀಚೆಗೆ ದ್ಯಾವರಹಳ್ಳಿ ಗ್ರಾಮದ ದಲಿತ ಕೋಮಿಗೆ ಸೇರಿದ ಸುರೇಶ್ ಎಂಬುವರು ಅದೇ ಗ್ರಾಮದ ೯ ಜನ ಸವರ್ಣಿಯರ ಮೇಲೆ ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣವನ್ನು ದಿಬ್ಬೂರಹಳ್ಳಿ ಪೋಲೀಸ್ ಠಾಣೆಯಲ್ಲಿ ದಾಖಲಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ಯುವಸೇನೆ ನೇತೃತ್ವದಲ್ಲಿ ನೂರಾರು ಸವರ್ಣಿಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕಲಿಗ ಯುವ ಸೇನೆ ತಾಲ್ಲೂಕು ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ವಕ್ಕಲುತನ ಮಾಡಿ ಬದಕುತ್ತಿರುವ ನಿರಪರಾಧಿ ಒಕ್ಕಲಿಗರ ಮೇಲೆ ಕೆಲವರ ಕುಮ್ಮಕ್ಕು ಹಾಗೂ ಒತ್ತಾಯದಿಂದ ಪ್ರಕರಣಗಳನ್ನು ದಾಖಲು ಮಾಡುವುದನ್ನು ಬಿಟ್ಟು ಯಾರೇ ಪ್ರಕರಣ ನೀಡಿದರೂ ಸಹ ಸತ್ಯಸತ್ಯತೆಗಳನ್ನು ಪರಿಶೀಲಿಸಿ ತಪ್ಪಿಸ್ತರ ವಿರುದ್ದ ಮಾತ್ರ ಪ್ರಕರಣ ದಾಖಲಿಸಿ. ತನಿಖೆ ನಡೆಸದೆ ನಿರಾಪರಾಧಿಗಳ ಮೇಲೆ ಪ್ರಕರಣಗಳನ್ನು ನಡೆಸಿದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಘ್ರ ಪ್ರತಿಭಟನೆ ನಡೆಸಲಾಗುವುದೆಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ ಸವರ್ಣಿಯರ ಮೇಲೆ ವಿನಾಕಾರಣ ಜಾತಿ ನಿಂದನೆ(ಅಟ್ರಾಸಿಟಿ) ಪ್ರಕರಣವನ್ನು ಪೋಲೀಸರು ನೊಂದಾವಣೆ ಮಾಡುತ್ತಿದ್ದಾರೆ. ಗಲಭೆ ಸಂದರ್ಭದಲ್ಲಿ ಹಾಜರಿಲ್ಲದವರ ಮೇಲೆ ಯಾವುದೇ ರಾಜಕೀಯ ಉದ್ದೇಶ ಹಾಗೂ ದ್ವೇಷದಿಂದ ನೀಡುವ ದೂರಿಗೆ ಪೋಲೀಸರು ಬೆಲೆ ನೀಡಿ ಪ್ರಕರಣಗಳನ್ನು ದಾಖಲು ಮಾಡಬಾರದು ಎಧರು.
ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸಮೂರ್ತಿ ಮಾತನಾಡಿ ಬೇರೆ ಇಲಾಖೆಯಲ್ಲಿ ದೂರು ಬಂದ ನಂತರ ತನಿಖೆ ಮಾಡಿ ನಂತರ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಆದರೆ ನಮ್ಮ ಇಲಾಖೆಯಲ್ಲಿ ದೂರು ಬಂದ ತಕ್ಷಣ ಪ್ರಕರಣ ದಾಖಲಿಸಿಕೊಂಡು ನಂತರ ತನಿಖೆ ಮಾಡುತ್ತೇವೆ. ತನಿಖೆಯಲ್ಲಿ ದೃಢಪಡದ ಪಕ್ಷದಲ್ಲಿ ಸುಳ್ಳು ಪ್ರಕರಣ ಎಂದು ಕೈಬಿಡಲಾಗುತ್ತದೆ. ಅದೇ ರೀತಿ ದೂರು ಬಂದ ನಂತರ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ತನಿಖೆ ಮಾಡುವರೆಗೂ ಯಾರನ್ನೂ ಬಂಧಿಸುವುದಿಲ್ಲ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಯುವ ಸೇನೆ ಉಪಾಧ್ಯಕ್ಷ ಪ್ರಭಾಕರ್, ತಾಲ್ಲೂಕು ಕಾರ್ಯಾಧ್ಯಕ್ಷ ಪ್ರಸನ್ನ, ನಗರಾಧ್ಯಕ್ಷ ಪುರುಷೋತ್ತಮ್, ನಗರ ಘಟಕ ಕಾರ್ಯದರ್ಶಿ ಮಂಜುನಾಥ್, ಪ್ರತಾಪ್, ಪ್ರಕಾಶ್, ಹರೀಶ್, ಗಂಗಾಧರ, ದೇವರಾಜ್, ಮುನಿರಾಜು, ಸೀನಪ್ಪ, ಕೇಶವಮೂರ್ತಿ, ಜಯರಾಂ, ರಘು, ಬಾಲಿ, ಮನೋಹರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.