Home News ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರ ಆಯ್ಕೆ

ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರ ಆಯ್ಕೆ

0

ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ದೇವರಮಳ್ಳೂರು ಎ.ವೆಂಕೋಬರಾವ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿದ್ದ ಎಂ.ಮುನಿಗುರ್ರಪ್ಪ ನಿಧನರಾದ ಕಾರಣ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಕಾರ್ಯದರ್ಶಿಯಾಗಿ ಎಸ್‌.ಎನ್‌.ಸತ್ಯನಾರಾಯಣಶೆಟ್ಟಿ, ಖಜಾಂಚಿಯಾಗಿ ಎಂ.ಶ್ರೀನಿವಾಸಮೂರ್ತಿ, ನಿರ್ದೇಶಕರಾಗಿ ಬಿ.ಕೆ.ಮುನಿರತ್ನಾಚಾರ್‌, ಎಂ.ಕೃಷ್ಣಪ್ಪ, ಕೆ.ಜಯರಾಮ್‌, ಎನ್‌.ಸರೋಜಮ್ಮ, ಭ್ರಮರಾಂಭ, ಎಸ್‌.ಹನುಮಪ್ಪ, ಜಿ.ಆರ್‌.ರಂಗಪ್ಪ ಮತ್ತು ಡಿ.ಆರ್‌.ನರಸಿಂಹರಾಜು ಆಯ್ಕೆಯಾಗಿದ್ದಾರೆ.