Home News ಜೆ.ವೆಂಕಟಾಪುರ ಗ್ರಾಮದಲ್ಲಿ ಬರಡು ರಾಸುಗಳಿಗೆ ಉಚಿತ ಚಿಕಿತ್ಸೆ

ಜೆ.ವೆಂಕಟಾಪುರ ಗ್ರಾಮದಲ್ಲಿ ಬರಡು ರಾಸುಗಳಿಗೆ ಉಚಿತ ಚಿಕಿತ್ಸೆ

0

ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ತಜ್ಞರಿಂದ ಬರಡು ರಾಸುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು.
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಗೈನಕಾಲಜಿಸ್ಟ್‌ ಡಾ.ಚಂದ್ರಶೇಖರ್ ಬುಗ್ಗಿ ಅವರ ನೇತೃತ್ವದಲ್ಲಿ ಜೆ.ವೆಂಕಟಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 155 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಹೈನುಗಾರಿಕೆಯ ಬಗ್ಗೆ, ಅವುಗಳ ರೋಗಲಕ್ಷಣಗಳು ಹಾಗೂ ಪಾಲನೆ ಪೋಷಣೆಯ ಬಗ್ಗೆ ಗ್ರಾಮಸ್ಥರಿಗೆ ಡಾ.ಚಂದ್ರಶೇಖರ್ ಬುಗ್ಗಿ ತಿಳುವಳಿಕೆ ನೀಡಿದರು.
ರಾಸುಗಳ ಪ್ರಸೂತಿ ಹಾಗೂ ಗರ್ಭಕೋಶ ಖಾಯಿಲೆ ಕುರಿತಂತೆ ಅಮೇರಿಕೆಯಿಂದ ಉನ್ನತ ಶಿಕ್ಷಣಕ್ಕಾಗಿ ಆಗಮಿಸಿದ್ದ ಡಾ.ಶೈ ಅವರು ಗ್ರಾಮಸ್ಥರು ಹಾಗೂ ತಜ್ಞರಿಂದ ವಿವಿಧ ಮಾಹಿತಿ ಪಡೆದರು.
ಕೋಚಿಮುಲ್‌ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎನ್.ಶಿವರಾಮ್, ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಆಂಜಿನಪ್ಪ, ಡಾ.ರವಿಚಂದ್ರ, ಡಾ.ರಾಮಕೃಷ್ಣರೆಡ್ಡಿ, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ, ತಮ್ಮಣ್ಣ, ಸಿದ್ದೇಶ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.