ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಮನವಿ ಪತ್ರವನ್ನು ರೈತರು ಮತ್ತು ರೀಲರುಗಳ ಪರವಾಗಿ ಮುಖಂಡ ಬಿ.ಕೆಂಪರೆಡ್ಡಿ ನೀಡಿದರು. ಕನಿಷ್ಟ ಬೆಂಬಲ ಬೆಲೆ, ಆಮದು ರೇಷ್ಮೆಗೆ ಸುಂಕ ವಿಧಿಸುವುದು ಮತ್ತು ಕೆಎಸ್ಎಂಬಿ ಮೂಲಕ ಹೆಚ್ಚು ರೇಷ್ಮೆ ಖರೀದಿಯ ವಿಷಯಗಳನ್ನು ಕೇಂದ್ರ ಜವಳಿ ಸಚಿವ ಆನಂದ ಶರ್ಮ ಅವರ್ಲಲಿ ಚರ್ಚಿಸಲು ಸದ್ಯದ್ಲಲೇ ರಾಜ್ಯದಿಂದ ನಿಯೋಗದೊಂದಿಗೆ ಹೊರಡುವುದಾಗಿ ಕಾರ್ಮಿಕ ಮತ್ತು ರೇಷ್ಮೆ ಬಿ.ಎನ್.ಬಚ್ಚೇಗೌಡ ತಿಳಿಸಿದರು.