ಕಾಂಗ್ರೆಸ್‍ನಲ್ಲಿ ಭಿನ್ನಮತವಿದೆ ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆಂಬದು ಜೆಡಿಎಸ್ ಮುಖಂಡರ ಭ್ರಮೆ, ಪಕ್ಷದಿಂದ ಎಲ್ಲಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ ಅಭ್ಯರ್ಥಿಗಳಿರುತ್ತಾರೆ, ಗೆಲುವು ನಮ್ಮದೇ ಎಂದು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಗ್ರಾಮ ಪಂಚಾಯ್ತಿವಾರು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಎಲ್ಲಾ ಕ್ಷೇತ್ರಗಳಿಗೂ ಕಾರ್ಯಕರ್ತರು ಸೂಚಿಸುವ ಅಭ್ಯರ್ಥಿಗಳಿಂದಲೇ ನಾಮಪತ್ರಗಳು ಸಲ್ಲಿಕೆಯಾಗಲಿವೆ, ಗೆಲ್ಲುವಂತಹ ಸಾಮಥ್ರ್ಯವಿರುವ ಜನಪರ ಕಾಳಜಿಯನ್ನು ಹೊಂದಿರುವಂತಹವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಆಯ್ಕೆ ಮಾಡಬೇಕು, ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಗೊತ್ತಿಲ್ಲದವರು, ಗುಂಪುಗಾರಿಕೆ ಮಾಡಿ, ನಾಯಕರಾಗಲು ಯತ್ನಿಸುತ್ತಿದ್ದಾರೆ, ಇದ್ಯಾವುದಕ್ಕೂ ಕಿವಿಗೊಡದೆ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಅಧಿಕೃತ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಬೇಕು, 23 ನೇ ತಾರೀಖಿನಿಂದ ಗಂಜಿಗುಂಟೆ, ಚಿಲಕಲನೇರ್ಪು, ದಿಬ್ಬೂರಹಳ್ಳಿ, ಅಬ್ಲೂಡು, ಚೀಮಂಗಲ, ಮತ್ತು ಜಂಗಮಕೋಟೆ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಹಾಗೂ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆದು ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಲಾಗುತ್ತದೆ ಎಂದರು.
ಬೆಳೆಸಿದ ನಾಯಕರು ಎದುರಾಗಿದ್ದಾರೆ
ಅನೇಕ ವರ್ಷಗಳು ತಪಸ್ಸು ಮಾಡಿದಂತೆ ಸಂಪಾದನೆ ಮಾಡಿಕೊಂಡಿದ್ದ ರಾಜಕೀಯವನ್ನು ಧಾರೆಯೆರೆದು ಬೆಳೆಸಿದ ನಾಯಕರು ಇಂದು ಎದುರಾಗಿ ಅವರು ಚೆನ್ನಾಗಿದ್ದಾರೆ, ಆದರೆ ನಾವೇ ಬೆಳೆಸಿದ ನಾಯಕರು ಎದುರಾದಾಗ ಆಗುತ್ತಿರುವ ನೋವನ್ನು ತಡೆದುಕೊಳ್ಳಲಾಗುತ್ತಿಲ್ಲ, ಅದನ್ನು ವಿವರಿಸಲು ಸಾಧ್ಯವಿಲ್ಲ, ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳು ವೈಯಕ್ತಿಕವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡಬೇಕು, ನಾವೆಲ್ಲರೂ ಒಂದಾಗುತ್ತೇವೆ, ಒಂದಾಗಿ ಕೆಲಸ ಮಾಡುತ್ತೇವೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಟಿಕೆಟ್ ಪಡೆಯಬೇಕಾದರೆ ಸಾಮಾನ್ಯ/ಹಿಂದುಳಿದ/ಎಸ್.ಸಿ/ಎಸ್.ಟಿ. ಅಭ್ಯರ್ಥಿಗೆ ಜಿಲ್ಲಾ ಪಂಚಾಯ್ತಿಗೆ 10,000 ಮಹಿಳೆಯರಿಗೆ 5000, ತಾಲ್ಲೂಕು ಪಂಚಾಯ್ತಿಗೆ 5000, ಮಹಿಳೆಯರಿಗೆ 2500, ರೂಗಳನ್ನು ಪಕ್ಷಕ್ಕೆ ಠೇವಣಿ ಇಡಬೇಕು. ಎಂದರು.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಸಾದಲಿ ಜೈಪ್ರಕಾಶ್, ಕೆ.ಗುಡಿಯಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಂ.ಮುನಿಯಪ್ಪ, ತಾ.ಪಂ.ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಸದಸ್ಯ ವೇಣುಗೋಪಾಲ್, ಶ್ರೀನಾಥ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಚೀಮನಹಳ್ಳಿ ಗೋಪಾಲ್, ಗಂಜಿಗುಂಟೆ ಮೌಲಾ, ಮಾಜಿ ಜಿ.ಪಂ.ಅಧ್ಯಕ್ಷ ಸುಭ್ರಮಣಿ, ಮಿತ್ತನಹಳ್ಳಿ ಹರೀಶ್, ಬಸವಾಪಟ್ಟಣ ಬೈರೇಗೌಡ, ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಂದಿ ಮುಖಂಡರುಗಳು ಹಾಜರಿದ್ದರು.