Home News ಎಂ.ಶಶಿಧರ್ ಗೆ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರ

ಎಂ.ಶಶಿಧರ್ ಗೆ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರ

0

ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಇಂಡಿಯನ್ ಸಾಲಿಡಿಟರಿ ಕೌನ್ಸಿಲ್ ಈಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರವನ್ನು ಪ್ರಧಾನ ಮಾಡಿದ್ದಾರೆ. ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲರಾದ ಡಾ.ಬಿಷಮ್ ನಾರಾಯಣ ಸಿಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ.ಜಿ.ವಿ.ಜಿ.ಕೃಷ್ಣಮೂರ್ತಿ, ಪಂಜಾಬ್ ಮಾಜಿ ರಾಜ್ಯಪಾಲರಾದ ಜಸ್ಟಿಸ್ ಓ.ಪಿ.ವರ್ಮ ಹಾಜರಿದ್ದರು.