Home News ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

0

ಮಾನಸ ಮೆಡಿಕಲ್ ಟ್ರಸ್ಟ್ ಹಾಗೂ ಪ್ರಜೆಕ್ಟ್ ದೃಷ್ಠಿ್ಟಿ ಸಹಯೋಗದೊಂದಿಗೆ ನಗರದ ಓ.ತಿಮ್ಮಯ್ಯ ರಸ್ತೆಯಲ್ಲಿರುವ ಮಾನಸ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು.
‘ಗ್ರಾಮೀಣ ಪ್ರದೇಶದ ಜನರು ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಪಡೆಯುವಂತಾಗಬೇಕು. ಕೂಲಿ ಕಾರ್ಮಿಕರು, ಬಡಜನರು, ಗ್ರಾಮೀಣ ಪ್ರದೇಶದ ಜನರು ಹಲವು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಣ್ಣಿನ ಆಪರೇಶನ್ ಮಾಡಿಸಲು ಸುಮಾರು ೧೦ ರಿಂದ ೧೫ ಸಾವಿರ ರೂ ವೆಚ್ಚವಾಗುತ್ತಿದ್ದು, ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಮಾಡಲು ಕಷ್ಟವಾಗಿದ್ದು, ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು’ ಎಂದು ಶಿಬಿರವನ್ನು ಉದ್ಘಾಟಿಸಿದ ಶಾಸಕ ಎಂ.ರಾಜಣ್ಣ ತಿಳಿಸಿದರು.
ಡಾ. ಮಧುಕರ್ ಮಾತನಾಡಿ, ಪ್ರತಿ ತಿಂಗಳ ಕೊನೆಯ ಗುರುವಾರ ಮಾನಸ ಮೆಡಿಕಲ್ಸ್ ಹಾಗೂ ಪ್ರಾಜೆಕ್ಟ್ ದೃಷ್ಠಿ ವತಿಯಿಂದ ಉಚಿತ ಕಣ್ಣಿನ ಶಸ್ತ್ರ ಶಿಬಿರವನ್ನು ಏರ್ಪಡಿಲಾಗಿದೆ. ಗೌರಿಬಿದನೂರಿನಲ್ಲಿ ಮಾನಸ ಮೆಡಿಕಲ್ಸ್ನಿಂದ ಕಣ್ಣಿನ ಆಸ್ಪತ್ರೆಯ ಶಾಖೆಯನ್ನು ಪ್ರಾರಂಭಮಾಡಿದ್ದು, ರೋಗಿಗಳನ್ನು ಆಸ್ಪತ್ರೆಯ ವಾಹನದಲ್ಲೇ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಔಷಧಿಗಳನ್ನು ಉಚಿತವಾಗಿ ನೀಡಿ ಅವರ ಮನೆಗೆ ಬಿಡಲಾಗುವುದು, ಸಾರ್ವಜನಿಕರು ವಯಸ್ಸಿನ ಅಂತರವಿಲ್ಲದೆ ಕಣ್ಣಿನ ತೊಂದರೆಯಿದ್ದಲ್ಲಿ ಬಂದು ಶಿಬಿರದ ಪ್ರಯೋಜನವನ್ನು ಪಡೆಯಬಹುದು’ ಎಂದು ಹೇಳಿದರು.
ಡಾ.ಶಬರಿ, ನಗರಸಭಾ ಸದಸ್ಯರಾದ ಅಫ್ಸರ್ ಪಾಷ, ಮಹಮ್ಮದ್ ಅಲಿ, ಬಿ.ಜೆ.ಪಿ ಚಿಕ್ಕಬಳ್ಳಾಪುರ ಉಪಾದ್ಯಕ್ಷ ದಾಮೋದರ್, ರಮೇಶ್, ಮಾನಸ ಆಸ್ಪತ್ರೆಯ ಶಿವಕುಮಾರ್, ಸಿಬ್ಬಂದಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.