ಚಲಾವಣೆ ರದ್ದಾದ ನೋಟುಗಳ ಬದಲಾವಣೆ ಸಮಯದಲ್ಲಿ ನಾಗರಿಕರೊಬ್ಬರಿಗೆ ಅರ್ಜಿಯನ್ನು ಭರ್ತಿ ಮಾಡಿಕೊಡುತ್ತಿದ್ದ ಆಮ್ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷರ ಮೇಲೆ ನಗರಸಭೆ ಸದಸ್ಯರೊಬ್ಬರು ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ.
ಆಮ್ ಆದ್ಮಿ ಪಕ್ಷದ ನಗರ ಘಟಕದ ಸಂಚಾಲಕ ಕದಿರಿಪಾಳ್ಯದ ಬಿ.ಆರ್.ರಾಮಚಂದ್ರರ ಮೇಲೆ ನಗರಸಭೆ ಸದಸ್ಯ ವೆಂಕಟಸ್ವಾಮಿ ಹಲ್ಲೆ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಭವನದ ಬಳಿ ಇರುವ ಪ್ರಧಾನ ಅಂಚೆ ಕಚೇರಿ ಬಳಿ ಚಲಾವಣೆ ರದ್ದಾದ ಐದುನೂರು ಹಾಗೂ ಸಾವಿರ ರೂಪಾಯಿಯ ನೋಟುಗಳ ಬದಲಾವಣೆಗೆ ಸರತಿಯಲ್ಲಿ ನಿಂತಿದ್ದ ಸಾರ್ವಜನಿಕರಿಗೆ ಅಂಚೆ ಕಚೇರಿ ಬಳಿ ರಾಮಚಂದ್ರ ಅಂಚೆ ಕಚೇರಿಯಲ್ಲಿ ಒದಗಿಸಬೇಕಿದ್ದ ಅರ್ಜಿಯನ್ನು ಭರ್ತಿ ಮಾಡಿಕೊಡುತ್ತಿದ್ದರು.
ಈ ವೇಳೆ ಅಲ್ಲಿಗೆ ಬಂದ ವೆಂಕಟಸ್ವಾಮಿ ಇದು ನನ್ನ ಏರಿಯಾ ಇಲ್ಲಿ ಜನರಿಗೆ ಅರ್ಜಿ ಬರೆದುಕೊಡಲು ನಿನಗೆ ಯಾರು ಹೇಳಿದ್ದು ಎಂದು ನಾನು ತಲೆಗೆ ಧರಿಸಿದ್ದ ಪಕ್ಷದ ಟೋಪಿಯನ್ನು ಕಿತ್ತೆಸೆದು ತಲೆಗೆ ಹೊಡೆದಿದ್ದಾರೆ.
ನಿನ್ನನ್ನು ಸುಮ್ಮನೆ ಬಿಡೊಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ನಗರಠಾಣೆಯಲ್ಲಿ ಬಿ.ಆರ್.ರಾಮಚಂದ್ರ ದೂರು ದಾಖಲಿಸಿದ್ದಾರೆ.