ನಗರದ ಹೊರವಲಯದ ಚಿಂತಾಮಣಿ ಹಾಗೂ ಹೊಸಕೋಟೆ ಬೈಪಾಸ್ ರಸ್ತೆಯ ಬಳಿ ಟ್ರಾಕ್ಕರ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಬಬ್ಬ ವ್ಯಕ್ತಿ ಮೃತಪಟ್ಟಿರು ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ತಾಲ್ಲೂಕಿನ ದೇವರಮಳ್ಳೂರು ನಿವಾಸಿಯಾದ ಚಿಕ್ಕಮುನಿತಾಯಪ್ಪ(೫೨) ಮೃತ ವ್ಯಕ್ತಿ. ನಗರದ ಬಸ್ ನಿಲ್ದಾಣದ ಬಳಿ ಚರಂಡಿಯಲ್ಲಿ ಗೊಬ್ಬರವನ್ನು ತುಂಬಿಸಿಕೊಂಡು ನಗರದ ಹೊರ ವಲಯಕ್ಕೆ ಸಾಗಿಸಿಕೊಂಡು ಹೊಗುತ್ತಿದ್ದ, ಟ್ಯಾಕ್ಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಿಕ್ಕಮುನಿತಾಯಪ್ಪಗೆ ತಲೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟ್ಯಾಕ್ಕರ್ ತಾಲ್ಲೂಕಿನ ಇದ್ದಲೂಡು ಗ್ರಾಮಕ್ಕೆ ಸೇರಿದ್ದು, ಟ್ಯಾಕ್ಕರ್ ಚಾಲಕ ಸ್ಥಳದಲ್ಲೇ ಟ್ಯಾಕ್ಕರ್ ಬಿಟ್ಟು ಪರಾರಿಯಾಗಿದ್ದಾನೆ. ಮೃತ ವ್ಯಕ್ತಿಗೆ ಇಬ್ಬರು ಮಕ್ಕಳು ಹಾಗೂ ಪತ್ನಿ ಇದ್ದಾರೆ. ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತೀದ್ದಾರೆ. ಸ್ಥಳಕ್ಕೆ ಆಗಮಿಸಿದ ನಗರದ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳವನ್ನು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
- Advertisement -
- Advertisement -
- Advertisement -
- Advertisement -