Home News ಸುಸಜ್ಜಿತವಾದ ಪೊಲೀಸ್ ಠಾಣೆ ಆಡಂಬರವಿಲ್ಲದೆ ಉದ್ಘಾಟನೆ

ಸುಸಜ್ಜಿತವಾದ ಪೊಲೀಸ್ ಠಾಣೆ ಆಡಂಬರವಿಲ್ಲದೆ ಉದ್ಘಾಟನೆ

0

ಸುಸಜ್ಜಿತವಾದ ಪೊಲೀಸ್ ಠಾಣೆ ಕಟ್ಟಡವನ್ನು ಶುಕ್ರವಾರ ಯಾವುದೇ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳದೇ ಉದ್ಘಾಟಿಸಲಾಗಿದೆ. ಪೂಜೆ, ಹೋಮ, ಹೂಗಳ ಅಲಂಕಾರವಿಲ್ಲದೆಯೇ ಉದ್ಘಾಟನೆಗೊಂಡ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಸುವ ಭಾಗ್ಯ ಪೊಲೀಸರದ್ದಾಗಲಿದೆ.
ನಗರದ ದಿಬ್ಬೂರಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗ ಇರುವ ಪೊಲೀಸ್ ವಸತಿ ಗೃಹಗಳ ಆವರಣದಲ್ಲಿಯೆ ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಕಾರ್ಯ ನಡೆದಿದ್ದು ಅಲ್ಲಿಗೆ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ.
ಪೊಲೀಸ್ ವಸತಿ ಗೃಹ ನಿರ್ಮಾಣ ಮಂಡಳಿಯಿಂದ 90 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಂದಸ್ತಿನ ಸುಸಜ್ಜಿತ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣವಾಗಿದ್ದು, ಆ ಕಟ್ಟಡದಲ್ಲಿ ಗ್ರಾಮಾಂತರ ಠಾಣೆಯು ಕಾರ್ಯನಿರ್ವಹಿಸಲಿದೆ.
‘ಹೊಸ ಪೊಲೀಸ್ ಠಾಣೆ ಕಟ್ಟಡವನ್ನು ಜಿಲ್ಲಾ ಕೇಂದ್ರದಲ್ಲಿ ಶಕ್ರವಾರ ಗೃಹಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಅಲ್ಲಿಗೆ ಗ್ರಾಮಾಂತರ ಪೊಲೀಸ್ ಠಾಣೆ ಸ್ಥಳಾಂತರವಾಗಲಿದೆ. ಈ ಸುಸಜ್ಜಿತ ಕಟ್ಟಡದಲ್ಲಿ ದೊಡ್ಡ ಹಾಲ್, ಎರಡು ಲಾಕಪ್, ಆಯುಧಗಳಿಗೆ ಕೊಠಡಿ, ಕಂಪ್ಯೂಟರ್ ಕೊಠಡಿ, ರೈಟರ್ಗೆ ಕೊಠಡಿ, ಸಬ್ಇನ್ಸ್ಪೆಕ್ಟರ್ ಹಾಗೂ ಕ್ರೈಂ ಸಬ್ಇನ್ಸ್ಪೆಕ್ಟರ್ಗೆ ಕೊಠಡಿಗಳಿವೆ. ಶೌಚಾಲಗಗಳಿವೆ. ಮಹಡಿಯ ಮೇಲೆ ಎರಡು ರೆಸ್ಟ್ ರೂಮ್ಗಳು ಸಹ ಇವೆ. ಪೊಲೀಸರಿಗೆ ಹಾಗೂ ಠಾಣೆಗೆ ಕೆಲಸ ಕಾರ್ಯ, ಪ್ರಕರಣಗಳ ಸಂಬಂಧ ಬರುವ ನಾಗರಿಕರಿಗೂ ಮೂಲ ಸೌಲಭ್ಯಗಳು ಇಲ್ಲಿ ಸಿಗಲಿವೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ತಿಳಿಸಿದರು.