Home News ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ‘ಕಾವೇರಿ ಗೋಲ್ಡ್’ ಹೊಸ ತಳಿ

ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ‘ಕಾವೇರಿ ಗೋಲ್ಡ್’ ಹೊಸ ತಳಿ

0

ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ‘ಕಾವೇರಿ ಗೋಲ್ಡ್’ ರೇಷ್ಮೆ ಗೂಡು ಆಗಮಿಸಿದ್ದು, ಹೊಸ ರೇಷ್ಮೆ ಗೂಡಿನ ತಳಿಯ ಬಗ್ಗೆ ರೈತರು ಮತ್ತು ರೀಲರುಗಳು ಕುತೂಹಲ ತಳೆದಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಕೈವಾರದ ಸುಬ್ಬರೆಡ್ಡಿ ಪ್ರಯೋಗಿಕವಾಗಿ ಬೆಳೆದಿರುವ ಹೊಸತಳಿ ‘ಕಾವೇರಿ ಗೋಲ್ಡ್’ ಒಂದು ಕೆ.ಜಿ ೫೦೦ ರೂಗಳಿಗೆ ಮಾರಾಟ ವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಯ ಡಾ.ಮೋರಿಸ್ ಮೂಲಕ ಚಿಂತಾಮಣಿ ತಾಲ್ಲೂಕಿನ ಕೈವಾರದ ಸಾವಿರ ಮೊಟ್ಟೆಗಳನ್ನು ಖರೀದಿ ಮಾಡಿ ಸುಮಾರು ೯೨೦-೯೩೦ ಕೆಜಿ ಗೂಡು ಉತ್ಪಾದನೆ ಮಾಡಿದ್ದು, ಮಾರುಕಟ್ಟೆಗೆ ತಂದಿದ್ದ ಸ್ಯಾಂಪಲ್ ಗೂಡು ಗರಿಷ್ಠ ೫೦೦ ರೂಗಳಿಗೆ ರೀಲರ್ ರೋಷನ್‌ಪಾಷ ಖರೀದಿ ಮಾಡಿದ್ದಾರೆ.
ಕೋಲಾರದ ಕ್ಯಾಲನೂರಿನ ಮಡಿವಾಳ ಕ್ರಾಸ್‌ನಲ್ಲಿ ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆಯ ನಿರ್ದೇಶಕರಿಂದ ಸರಬರಾಜು ಮಾಡಿರುವ ‘ಕಾವೇರಿ ಸುವರ್ಣ ತಳಿ’ಯನ್ನು ಪ್ರಾಯೋಗಿಕವಾಗಿ ಪಡೆದು ವಿಜ್ಞಾನಿ ಮೋರಿಸ್ ಮಾರ್ಗದರ್ಶನದಲ್ಲಿ ಚಾಕಿ ಮಾಡಿ ಹುಳುಸಾಕಾಣಿಕೆ ಮನೆ ಮತ್ತು ಸೊಪ್ಪುಹಾಕಿ ಉಷ್ಠಾಂಶವನ್ನು ನಿರ್ವಹಣೆ ಮಾಡಿದ ಫಲದಿಂದಾಗಿ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗಿದೆ. ಸಾಮಾನ್ಯವಾಗಿ ನಾವು ಕೋಲಾರ ಗೋಲ್ಡ್ ತಳಿಯನ್ನು ಪಡೆದು ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಿದ್ದೇವೆ ಆದರೆ ವಿಜ್ಞಾನಿ ಮೋರಿಸ್ ಅವರ ಮಾರ್ಗದರ್ಶನದಲ್ಲಿ ೧೫ ಸಾವಿರ ರೂಗಳನ್ನು ನೀಡಿ ಒಂದು ಸಾವಿರ ಮೊಟ್ಟೆ ಪಡೆದು ಸಾಕಾಣಿಕೆ ಮಾಡಿದ್ದರಿಂದ ಸುಮಾರು ೯೨೦–೯೩೦ ಕೆ.ಜಿ ಗೂಡು ಇಳುವರಿ ಬಂದಿದೆ. ಇಂದು ಸ್ಯಾಂಪಲ್ ಹಾಕಿದ್ದ ೫೦ ಕೆಜಿ ಗೂಡನ್ನು ೨೫ ಸಾವಿರ ರೂಗಳಿಗೆ ಮಾರಾಟ ಮಾಡಲಾಗಿದೆ’ ಎಂದು ರೈತ ಕೈವಾರದ ಸುಬ್ಬರೆಡ್ಡಿ ಅವರ ತಮ್ಮ ಮಂಜುನಾಥ್‌ರೆಡ್ಡಿ ತಿಳಿಸಿದ್ದಾರೆ.