Home News ವೃತ್ತಿ ನಿಷ್ಟೆ, ನಿಷ್ಕಳಂಕ ಸೇವೆಯಿಂದ ಯಶಸ್ಸು ಸಾಧ್ಯ

ವೃತ್ತಿ ನಿಷ್ಟೆ, ನಿಷ್ಕಳಂಕ ಸೇವೆಯಿಂದ ಯಶಸ್ಸು ಸಾಧ್ಯ

0

ಯಾವೊಬ್ಬ ನೌಕರನೂ ತನ್ನ ವೃತ್ತಿಯಲ್ಲಿ ವೃತ್ತಿ ನಿಷ್ಠೆ, ಪಾರದರ್ಶಕತೆ ಮತ್ತು ದಕ್ಷತೆಯಂತಹ ಗುಣಗಳನ್ನು ಪರಿಪಾಲಿಸಿದಾಗ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯಶಿಕ್ಷಕ ಜೆ.ವಿ.ಶಿವನಂಜಪ್ಪ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸಿಆರ್ಸಿ ಕೇಂದ್ರದಲ್ಲಿ ಈಚೆಗೆ ಶಿಕ್ಷಕವೃಂದವು ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಾಲೆಗಳಲ್ಲಿ ಸಮಯಪಾಲನೆ, ಅತ್ಯುತ್ತಮ ಮಟ್ಟದ ನಾಯಕತ್ವ ತರಬೇತಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕುವ ಹತ್ತು-ಹಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ ಹೆಮ್ಮೆಯಿದೆ ಎಂದು ತಿಳಿಸಿದರು.
ನಿವೃತ್ತಮುಖ್ಯ ಶಿಕ್ಷಕ ನಂದೀಶ್ ಮಾತನಾಡಿ, ಎಲ್ಲೆಡೆ ತುಂಬಿ-ತುಳುಕುತ್ತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಯುವಪೀಳಿಗೆಯು ಎಚ್ಚೆತ್ತುಕೊಳ್ಳಬೇಕು. ಸಮಾಜಕ್ಕೆ ಹತ್ತು-ಹಲವು ರೀತಿ ಸೇವೆಗಳನ್ನು ಮಾಡುವ, ಆತ್ಮಸ್ಥೈರ್ಯದ ಜೊತೆಗೆ ಸಾಧಿಸುವ ಛಲವನ್ನು ಮಕ್ಕಳಲ್ಲಿ ತುಂಬುವ ಕಾರ್ಯವಾಗಬೇಕಿದೆ ಎಂದರು.

ಶಿಡ್ಲಘಟ ತಾಲ್ಲೂಕಿನ ಜಂಗಮಕೋಟೆ ಸಿಆರ್ಸಿ ಕೇಂದ್ರದಲ್ಲಿ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಕೆ.ಸುಮಾ ಮತ್ತು ಆರ್.ವೇಣುಮಾಧವಿ ಅವರನ್ನು ಸನ್ಮಾನಿಸಲಾಯಿತು.
ಶಿಡ್ಲಘಟ ತಾಲ್ಲೂಕಿನ ಜಂಗಮಕೋಟೆ ಸಿಆರ್ಸಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಕೆ.ಸುಮಾ ಮತ್ತು ಆರ್.ವೇಣುಮಾಧವಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾಯಿತರಾದ ಕೆ.ಸುಮಾ ಮತ್ತು ಆರ್.ವೇಣುಮಾಧವಿ ಅವರನ್ನು ಅಭಿನಂದಿಸಲಾಯಿತು. ೩೯ ವರ್ಷಗಳ ಶೈಕ್ಷಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಜೆ.ವಿ.ಶಿವನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಮುನಿಬಸವಯ್ಯ, ಶಿಕ್ಷಕರಾದ ವಿಜಯಕುಮಾರ್, ಸಿ.ಆರ್.ಪಿ ಸುಂದರಾಚಾರಿ, ಎಚ್.ಎಸ್.ರುದ್ರೇಶಮೂರ್ತಿ, ವಿ.ಎನ್.ಗೋಪಾಲಕೃಷ್ಣಯ್ಯ, ನೇತ್ರಾವತಿ, ಶಕುಂತಲಮ್ಮ, ಗೀತಾ, ಚಂದ್ರಶೇಖರ್, ಜೆ.ಬಿ.ಅಶೋಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.