Home News ವಿದ್ಯಾರ್ಥಿಗಳು ಆಚರಿಸಿದ ಶಿಕ್ಷಕರ ದಿನಾಚರಣೆ

ವಿದ್ಯಾರ್ಥಿಗಳು ಆಚರಿಸಿದ ಶಿಕ್ಷಕರ ದಿನಾಚರಣೆ

0

ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶಿಷ್ಠವಾಗಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ವಿದ್ಯಾರ್ಥಿಗಳೇ ರೂಪಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಿಗೆ ವಿವಿಧ ಕ್ರೀಡೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.
ಮ್ಯೂಸಿಕಲ್‌ ಚೇರ್‌ನಲ್ಲಿ ಶಿಕ್ಷಕರಾದ ಬಾಲಚಂದ್ರ(ಪ್ರಥಮ), ಎಂ.ಎನ್‌.ಲಕ್ಷ್ಮೀ(ದ್ವಿತೀಯ), ಎಂ.ಪರಮೇಶ್ವರಪ್ಪ(ತೃತೀಯ)ರಾದರೆ, ಬಕೆಟ್‌ಗೆ ಬಾಲ್‌ ಹಾಕುವುದರಲ್ಲಿ ಎಂ.ಬಾಲಚಂದ್ರ(ಪ್ರಥಮ), ಪರಮೇಶ್ವರಪ್ಪ(ದ್ವಿತೀಯ), ಶ್ರೀರಾಮಪ್ಪ(ತೃತೀಯ)ರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರ್ಥಿನಿ ಸ್ನೇಹಲತಾ ಮತನಾಡಿ ವರ್ಷಪೂರ್ತಿ ನಮ್ಮನ್ನು ರೂಪಿಸುವ, ತಿದ್ದುವ, ಕಲಿಸುವ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳಾದ ನಾವು ಅವರು ಆಡಿ ನಲಿಯುವಂತೆ ಮಾಡುವ ಮೂಲಕ ಆಚರಿಸಬೇಕೆಂದು ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಾದ ನಯನಾ, ರಜನಿ, ಮುತ್ತುರಾಜ್‌ ಭಾಗವಹಿಸಿದ್ದರು.