Home News ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ

ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ

0

ರೇಷ್ಮೆ ನೂಲು ಬಿಚ್ಚಣಿಕೆದಾರರು ಮತ್ತು ಕಾರ್ಮಿಕರಿಗೆ ರಾಜ್ಯ ರೇಷ್ಮೆ ಇಲಾಖೆಯ ಸಾಮಾನ್ಯ ಆರೋಗ್ಯ ವಿಮಾ ಸೌಲಭ್ಯ ಒದಗಿಸಲು ಉದ್ದೇಶಿಸಿ ಅದರ ಅಂಗವಾಗಿ ವಿಮಾ ನೋಂದಣಿ ಆಂದೋಲನ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ಅಧಿಕಾರಿ ಡಾ.ನಾಗರಾಜ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ ಮತ್ತು ಕಾರ್ಮಿಕರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡುವ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿ ಹಾಗೂ ಏಕೀಕೃತ ಪಾವತಿಗಳ ಇಂಟಫೇಸ್ ಆಪ್ ವತಿಯಿಂದ ಸಂಪರ್ಕ ಸಭೆಯನ್ನು ನಡೆಸಿ ಅವರು ಮಾಡಿದರು.
ರಾಜ್ಯದಾದ್ಯಂತ ಡಿಸೆಂಬರ್ ೨೬ ರಿಂದ ೨೯ ರವರಿಗೆ ಈ ವಿಮಾ ನೋಂದಣಿ ಆಂದೋಲನ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲಿ ಜಾರಿಯಲ್ಲಿರುವ ಸಾಮಾನ್ಯ ವಿಮಾ ಯೋಜನೆಯಲ್ಲಿ ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ಭೀಮಾ, ಅಪಘಾತ ವಿಮಾ ಯೋಜನೆ, ಮುಖ್ಯ ಮಂತ್ರಿ ಸಾಂತ್ವನ ಯೋಜನೆ, ವಿಮಾ ಯೋಜನೆಯಡಿ ರಾಜೀವ್ ಆರೋಗ್ಯ ಭಾಗ್ಯ, ವಾಜಪೇಯ ಆರೋಗ್ಯ ಶ್ರೀ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದ ಬಗ್ಗೆ ರೇಷ್ಮೆ ಕಾರ್ಮಿಕರಿಗೆ ಅವರು ಮಾಹಿತಿಯನ್ನು ನೀಡಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ಬಿಲ್ ಅಥವಾ ಟಿನ್ ನಂಬರ್ ಇಲ್ಲದೆ ನಮ್ಮ ರೇಷ್ಮೆ ತೆಗೆದುಕೊಳ್ಳುತ್ತಿಲ್ಲ, ಕ್ಯಾಷ್ ಲೆಸ್ ವ್ಯವಹಾರ ಮಾಡುವಾಗ ತಾಂತ್ರಿಕ ತೊಂದರೆಗಳು ಎದುರಾದರೆ ರೈತರಿಗೆ ತಿಳುವಳಿಕೆ ನೀಡುವರು ಯಾರು? ಮೋಬೈಲ್ ಬ್ಯಾಂಕಿಂಗ್‌ನಲ್ಲಿ ಹಣ ವರ್ಗಾವಣೆ ಮಾಡಿ ಎನ್ನುತ್ತೀರಿ, ಈ ಸಮಸ್ಯೆಗಳನ್ನು ಬಗೆಹರಿಸಿ, ರೀಲರುಗಳಲ್ಲದವರು ಮಾರುಕಟ್ಟೆಗೆ ಬಂದು ಹರಾಜು ಕೂಗುತ್ತಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ರೀಲರುಗಳು ತಮ್ಮ ಸಮಸ್ಯೆಯನ್ನು ಅಧಿಕಾರಿಗಳಿಗೆ ವಿವರಿಸಿದರು, ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಕೆ.ಎನ್.ಮಹೇಶ್, ರೇಷ್ಮೆ ಗೂಡು ಮಾರುಕಟ್ಟೆ ಉಪ ನಿರ್ದೇಶಕ ರತ್ನಯ್ಯ ಶೆಟ್ಟಿ, ನರಸಿಂಹ ಮೂರ್ತಿ, ರಾಮ್ ಕುಮಾರ್, ವಿ.ಕೃಷ್ಣಪ್ಪ, ರಹಮತ್ತುಲ್ಲಾ, ಜಬೀ, ಮಹೇಶ್, ನಾರಾಯಣಸ್ವಾಮಿ, ವೆಂಕಟೇಶ್, ನಯಾಜ್, ರಫೀಕ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.