ಯುವಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ, ದೇಶದಲ್ಲಿ ಬೇರು ಮಟ್ಟದಲ್ಲಿ ತಳವೂರಿರುವ ಭ್ರಷ್ಟಾಚಾರವನ್ನು ಕಿತ್ತು ಹಾಕುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ)ನ ರಾಜ್ಯ ಸಮಿತಿ ಖಜಾಂಚಿ ಬಿ.ವಿ.ಸಂಪಂಗಿ ಅಭಿಪ್ರಾಯಪಟ್ಟರು.
ದೇಶಪ್ರೇಮಿ ಭಗತ್‌ಸಿಂಗ್‌ರವರ 108ನೇ ಜನ್ಮ ದಿನೋತ್ಸವ ಅಂಗವಾಗಿ ಭಾನುವಾರ ಪಟ್ಟಣದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಡಿವೈಎಫ್‌ಐನಿಂದ ಹಮ್ಮಿಕೊಂಡಿದ್ದ ಡಿವೈಎಫ್‌ಐ ಸಂಘಟನೆಯ ಸದಸ್ಯತ್ಯ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೋರಾಟದ ಮನೋಭಾವವೇ ಇಲ್ಲವಾಗುತ್ತಿದೆ. ನೆರೆ ಹೊರೆಯ ಸಮಾಜದಲ್ಲಿ ಏನೆ ಆಗಲಿ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಯುವಜನರು ವರ್ತಿಸುತ್ತಿರುವುದು ವಿಷಾಧಕರ ಸಂಗತಿ. ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಾದಂತೆ ಯುವಜನರು ಹಾಗೂ ವಿದ್ಯಾರ್ಥಿಗಳ ಬೆರಳ ತುದಿಯಲ್ಲೇ ಇಂಟರ್‌ನೆಟ್, ಫೇಸ್‌ಬುಕ್ ಇನ್ನಿತರೆ ಹತ್ತು ಹಲವು ಸೌಕರ್ಯಗಳ ಲಭ್ಯವಿದ್ದು ತಂತ್ರಜ್ಞಾನದ ಬೆಳವಣಿಗೆಯಿಂದ ಇಡೀ ವಿಶ್ವವೇ ಪುಟ್ಟ ಗ್ರಾಮದಂತಾಗಿದೆ.ನಾನಾ ದೇಶಗಳ ಆಚಾರ, ವಿಚಾರ, ತೊಡುಗೆ, ಉಡುಗೆ ಸೇರಿದಂತೆ ಅಲ್ಲಿನ ಸಂಸ್ಕೃತಿಯ ಪ್ರಭಾವವೂ ನಮ್ಮವರ ಮೇಲೆ ಬಿದ್ದಿದ್ದು ನಮ್ಮ ದೇಶದ ಆಚಾರ, ವಿಚಾರಗಳು ಅಪಥ್ಯವಾಗುತ್ತಿವೆ. ಇದರಿಂದಾಗಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತನು, ಮನ, ಧನ ಅರ್ಪಿಸಿ ಹುತ್ಮಾತ್ಮರು ಸಹ ಯಾರೆಂದು ಗೊತ್ತಿಲ್ಲದಂತಾಗಿದೆ ಎಂದು ವಿಷಾಸಿದರು. ಯುವಜನರು, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಮಾತ್ರವೇ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ಸಹ ಈ ಸಮಸ್ಯೆಗಳನ್ನು ಎದುರಿಸಿಕೊಂಡೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿವೈಎಫ್‌ಐ ಸಂಘಟನೆಗೆ ಸದಸ್ಯತ್ವವನ್ನು ಆರಂಭಿಸಲಾಯಿತು. ಮುಖಂಡರಾದ ಕುಂದಲಗುರ್ಕಿ ಮುನೀಂದ್ರ, ಸದಾನಂದ, ವಾಸು, ಸಯ್ಯದ್, ಮಂಜುನಾಥ್, ವೆಂಕಟೇಶ್, ಸಿಐಟಿಯುನ ಲಕ್ಷ್ಮಿದೇವಮ್ಮ, ಎಸ್‌ಎಫ್‌ಐನ ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -