ಮಕ್ಕಳ ಚಟುವಟಿಕೆಗಳ ಆಧಾರದ ಮೇಲೆ ಅವರ ಪ್ರತಿಭೆಯನ್ನು ಗುರುತಿಸಿ ಅದರಲ್ಲಿ ಪ್ರೋತ್ಸಾಹಿಸುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಪ್ಯಾರೆಗಾನ್ ಇಂಗ್ಲೀಷ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳ ಮನಸ್ಸು ಸೂಕ್ಷ್ಮವಾದದ್ದು. ಒತ್ತಡದಿಂದ ಏನನ್ನೇ ಆಗಲಿ ಕಲಿಸಲಾಗದು. ಆಡುತ್ತಾ, ನಲಿಯುತ್ತಾ ಕಲಿಯುವ ವಾತಾವರಣ ಬಹು ಮುಖ್ಯವಾದದ್ದು. ಉಲ್ಲಾಸ ದಾಯಕ ಹಾಗೂ ಜ್ಞಾನ ಹೆಚ್ಚಿಸುವ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಿ. ಬಾಲ ಕಾರ್ಮಿಕರು ನಗರದಲ್ಲಿ ಹೆಚ್ಚಿದ್ದು, ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಕ್ಕಾಗ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡು ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಬೇಕು ಎಂದು ಹೇಳಿದರು.
ವಿಜಯಪುರ ವಿಜಯಾ ಕಾಲೇಜಿನ ಉಪನ್ಯಾಸಕ ಪ್ರದೀಪ್ ಮಕ್ಕಳಿಗೆ ಪ್ರೇರಕದಾಯಕವಾದ ಉಪನ್ಯಾಸವನ್ನು ನೀಡಿದರು. ದೇಶಭಕ್ತಿ, ತಂದೆ ತಾಯಿ ಗುರು ಹಿರಿಯರ ಬಗ್ಗೆ ಗೌರವ, ಚಿಂತಕರ ನುಡಿಗಳು ಮುಂತಾದವುಗಳೊಂದಿಗೆ ಹಲವು ಸಾಧಕರನ್ನು ಉದಾಹರಿಸಿದರು.
ಪ್ಯಾರೆಗಾನ್ ಇಂಗ್ಲೀಷ್ ಶಾಲೆಯ ಕಾರ್ಯದರ್ಶಿ ಸಯ್ಯದ್ ಅನ್ಸರ್ ಅಹ್ಮದ್, ವಿಜಯಪುರ ವಿಜಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಸಿ.ಮಂಜುನಾಥ್, ಪ್ರಾಂಶುಪಾಲರಾದ ಮಮತಾ, ಮಾಜಿ ಪುರಸಭಾ ಸದಸ್ಯ ಸಯ್ಯದ್ ಸಲಾಂ, ಮುಖ್ಯ ಶಿಕ್ಷಕ ಗಂಗಾಧರಪ್ಪ, ದೇವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -