Home News ಪಿಎಲ್‌ಡಿ ಬ್ಯಾಂಕ್ ಚುನಾವಣೆ; 14 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 51 ನಾಮಪತ್ರ ಸಲ್ಲಿಕೆ

ಪಿಎಲ್‌ಡಿ ಬ್ಯಾಂಕ್ ಚುನಾವಣೆ; 14 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 51 ನಾಮಪತ್ರ ಸಲ್ಲಿಕೆ

0

ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಬ್ಯಾಂಕಿನ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 51 ನಾಮಪತ್ರ ಸಲ್ಲಿಕೆಯಾಗಿದೆ.
ಜನವರಿ 27 ರಂದು ನಡೆಯಲಿರುವ ಚುನಾವಣೆಗೆ ಶನಿವಾರದವರೆಗೂ ಕೇವಲ 7 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು ಕಡೆಯ ದಿನವಾಗಿದ್ದ ಸೋಮವಾರದಂದು ಒಟ್ಟು 44 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಒಟ್ಟು 51 ನಾಮಪತ್ರಗಳು ಸಲ್ಲಿಕೆಯಾಗಿವೆ.
ಆನೂರು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಬಂಕ್ ಮುನಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರಾರು ನಾಮಪತ್ರ ಸಲ್ಲಿಸದ ಕಾರಣ ಬಂಕ್ ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ಟೌನ್ (ಹಿಂದುಳಿದ ವರ್ಗ ಬಿ) ಕ್ಷೇತ್ರದಿಂದ ಮಂಜುನಾಥ.ಎ.ಎಸ್. ವೆಂಕಟೇಶಪ್ಪ.ಎಚ್.ಎನ್. ಅಬ್ಲೂಡು ಸಾಮಾನ್ಯ ಕ್ಷೇತ್ರದಿಂದ ಸಿ.ಎಂ.ಗೋಪಾಲ್, ಸಿ.ಕೆ.ನಾರಾಯಣಸ್ವಾಮಿ, ಚಂದ್ರನಾಥ್, ಮೇಲೂರು ಸಾಮಾನ್ಯ ಕ್ಷೇತ್ರದಿಂದ ಎಂ.ವಿ.ಗೋಪಾಲಪ್ಪ, ಗೋಪಾಲರೆಡ್ಡಿ.ಎಂ , ಆರ್.ಬಿ.ಜಯದೇವ್, ಜಂಗಮಕೋಟೆ ಸಾಮಾನ್ಯ ಕ್ಷೇತ್ರದಿಂದ ಮಾರಪ್ಪ.ಡಿ.ಎನ್. ಕೆ.ಎಂ.ಭೀಮೇಶ್, ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿ.ವಿ.ರಂಗಪ್ಪ, ಆನಂದ್.ಕೆ. ಲಕ್ಷ್ಮಣರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ಡಿ.ಸಿ.ರಾಮಚಂದ್ರ, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿ.ಎಸ್.ರಾಮಚಂದ್ರ, ವೆಂಕಟರೆಡ್ಡಿ.ಎ.ಎಂ. ಶಿವಾರೆಡ್ಡಿ.ಎಲ್.ಎನ್. ನಾರಾಯಣಸ್ವಾಮಿ.ಸಿ. ಸಾಧಲಿ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಪ್ಪ, ಶ್ರೀನಿವಾಸ್, ಚೀಮಂಗಲ ಮಹಿಳಾ ಮೀಸಲು ಕ್ಷೇತ್ರದಿಂದ ಸುನಂದಮ್ಮ, ಸುಜಾತಮ್ಮ, ಗಂಜಿಗುಂಟೆ ಸಾಮಾನ್ಯ ಕ್ಷೇತ್ರದಿಂದ ದೊಡ್ಡ ನರಸಿಂಹರೆಡ್ಡಿ, ಎಂ.ಪಿ.ರವಿ, ವೈ ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಜಯಮ್ಮ, ರತ್ನಮ್ಮ, ಅನಸೂಯಮ್ಮ, ಮಳಮಾಚನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ.ಸಿ.ವಿ. ಬೈರೇಗೌಡ.ಕೆ. ಫಲಿಚೇರ್ಲು (ಹಿಂದುಳಿದ ವರ್ಗ ಎ) ಕ್ಷೇತ್ರದಿಂದ ಗೋವಿಂದಪ್ಪ, ಡಿ.ವಿ.ವೆಂಕಟೇಶಪ್ಪ, ತಾಲ್ಲೂಕು ವ್ಯಾಪ್ತಿ ಸಾಲಗಾರರಲ್ಲದ ಕ್ಷೇತ್ರದಿಂದ ದೇವರಾಜ್.ಎಂ, ಎ.ಎಂ.ತ್ಯಾಗರಾಜ್, ಎಚ್.ಶಂಕರ್, ಮುರಳಿ.ಎಂ. ಕೆ.ಶ್ರೀನಾಥ್, ಎನ್.ಕೃಷ್ಣಮೂರ್ತಿ ನಾಮ ಪತ್ರ ಸಲ್ಲಿಸಿದ್ದಾರೆ.
ಜನವರಿ 22 ಬುಧವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದ್ದು, ಜನವರಿ 27 ರ ಸೋಮವಾರ ಚುನಾವಣೆ ನಡೆಯಲಿದೆ.