Home News ಜಂಗಮಕೋಟೆಯಲ್ಲಿ ಹೊಸಕೋಟೆ ಸರಹದ್ದಿನ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ

ಜಂಗಮಕೋಟೆಯಲ್ಲಿ ಹೊಸಕೋಟೆ ಸರಹದ್ದಿನ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣ

0

ಸಾರ್ವಜನಿಕ ವಿಶ್ವಾಸಗಳಿಸುವಂತಹ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆಯಲ್ಲಿ ಹೊಸಕೋಟೆ ಸರಹದ್ದಿನ ತನಕ ಸುಮಾರು 62 ಲಕ್ಷ ರೂಪಾಯಿಗಳ ಒಂದೂವರೆ ಕಿ.ಮೀ ರಸ್ತೆಯ ಅಗಲೀಕರಣ ಮತ್ತು ಡಾಂಬರೀಕರಣದ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹಲವಾರು ರಸ್ತೆಗಳ ಅಗಲೀಕರಣ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಗ್ರಾಮಸ್ಥರೂ ಅದನ್ನು ಗಮನಿಸಿಕೊಳ್ಳಬೇಕು ಎಂದು ಹೇಳಿದರು.
ಸೂರ್ಯನಾರಾಯಣಗೌಡ, ನಜೀರ್ ಸಾಬ್, ರಮೇಶ್, ದೇವರಾಜ್, ಬಾಬು, ಎ.ಇ.ಇ ಜಮೀರ್ ಅಹ್ಮದ್, ರವಿ, ಮಳ್ಳೂರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.