ಗ್ರಾಮೀಣ ಯುವಕರು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಸ್ವಾವಲಂಬಿಗಳಾಗಬಹುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಅಡಿಕೆ ಪಟ್ಟೆಗಳಿಂದ ತಟ್ಟೆ, ಲೋಟಗಳನ್ನು ತಯಾರಿಸುವ ಘಟಕವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾವಂತ ಯುವಕರು ನಗರಗಳಿಗೆ ಹೋಗುವುದರ ಬದಲಾಗಿ ಗ್ರಾಮೀಣ ಭಾಗದಲ್ಲಿ ಸಿಗುವ ಕಚ್ಛಾಪದಾರ್ಥಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ನಗರದ ಮಾರುಕಟ್ಟೆಗೆ ಕಳುಹಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ಹೆಚ್ಚುತ್ತದೆ, ನಿರುದ್ಯೋಗ ನಿವಾರಣೆಯಾಗುತ್ತದೆ ಹಾಗೂ ಗ್ರಾಮಗಳಲ್ಲಿನ ಕಚ್ಛಾ ವಸ್ತುಗಳಿಗೆ ಬೆಲೆ ಬರುತ್ತದೆ ಎಂದು ಹೇಳಿದರು.
ಶ್ರೀ ಲಕ್ಷ್ಮೀ ಅಡಿಕೆ ತಟ್ಟೆಗಳ ಘಟಕದ ಬಿ.ಎನ್.ಕುಮಾರ್ ಮಾತನಾಡಿ, ಈ ಘಟಕಕ್ಕೆ ಬೇಕಾಗುವ ಅಡಿಕೆ ಪಟ್ಟೆಗಳನ್ನು ತುಮಕೂರು, ಶಿರಾ ಹಾಗೂ ಗುಬ್ಬಿಗಳಿಂದ ತಂದು ಸುಮಾರು ಎಂಟು ವಿಧದ ಗುಣಮಟ್ಟದ ತಟ್ಟೆ ಲೋಟಗಳನ್ನು ತಯಾರಿಸಲಾಗುವುದು. ಇದು ಪರಿಸರಸ್ನೇಹಿಯಾಗಿದೆ ಎಂದರು.
ಮಳ್ಳೂರಯ್ಯ, ವೀರಾಪುರ ಮುನಿಯಪ್ಪ, ಮುನಿರಾಜು, ಸೊಣ್ಣೇನಹಳ್ಳಿ ವೆಂಕಟೇಶ್, ವೀರಾಪುರ ಮುನಿರೆಡ್ಡಿ, ಎಂ.ಆರ್.ನಂಜುಂಡಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -