Home News ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ಪೂಜೆ

ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ಪೂಜೆ

0

ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ದೇವಾಲಯ ಕಟ್ಟಡದ ಪುನರ್ನಿರ್ಮಾಣದ ಅಂಗವಾಗಿ ವಿಶೇಷ ಪೂಜೆ, ಹೋಮ, ಅಗ್ನಿಕುಂಡ ಹಾಗೂ ದೀಪದಾರತಿಗಳನ್ನು ಆಯೋಜಿಸಲಾಗಿತ್ತು.
ಸುಮಾರು ನೂರಾರು ವರ್ಷಗಳ ಹಳೆಯದಾದ ದೇವಾಲಯದ ಕಟ್ಟಡವನ್ನು ಈಚೆಗೆ ಗ್ರಾಮಸ್ಥರೆಲ್ಲಾ ಸೇರಿ ಪುನರ್ನಿರ್ಮಾಣ ಮಾಡಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ದೇವಾಲಯ ಕಟ್ಟಡದ ಪುನರ್ನಿರ್ಮಾಣದ ಅಂಗವಾಗಿ ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕುಂಡದಲ್ಲಿ ಹಾದು ಬರಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ದೇವಾಲಯ ಕಟ್ಟಡದ ಪುನರ್ನಿರ್ಮಾಣದ ಅಂಗವಾಗಿ ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕುಂಡದಲ್ಲಿ ಹಾದು ಬರಲಾಯಿತು.

ಊರ ಹಬ್ಬದಂತೆ ಗ್ರಾಮವನ್ನೆಲ್ಲಾ ಸಿಂಗರಿಸಲಾಗಿತ್ತು. ಎಲ್ಲರ ಮನೆಗಳ ಮುಂದೆಯೂ ರಂಗೋಲಿಗಳನ್ನು ಹಾಕಿ, ವಿದ್ಯುತ್‌ ದೀಪಗಳು, ತಳಿರು ತೋರಣಗಳು ಹಾಗೂ ಹೂಗಳಿಂದ ಮನೆಮನೆ, ಬೀದಿಬೀದಿಗಳನ್ನು ಅಲಂಕರಿಸಿದ್ದರು. ಗ್ರಾಮದ ಮಹಿಳೆಯರು ತಂಬಿಟ್ಟು ದೀಪಗಳನ್ನು ವಿವಿಧ ಹೂಗಳಿಂದ ಅಲಂಕರಿಸಿ ತಲೆಯ ಮೇಲಿಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಅಗ್ನಿಕುಂಡದಲ್ಲಿ ಹಾದು ಬಂದು, ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕುಂಡದಲ್ಲಿ ಹಾದು ಬಂದ ನಂತರ ಗ್ರಾಮಸ್ಥರೆಲ್ಲಾ ಅಭಯಾಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದವನ್ನು ವಿನಿಯೋಗಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಕೆ.ಜಿ.ಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಭಾಗವಹಿಸಿದ್ದರು.