Home News ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಬ್ರಹ್ಮರಥೋತ್ಸವ

ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಕಲ್ಯಾಣ ಬ್ರಹ್ಮರಥೋತ್ಸವ

0

ಪಟ್ಟಣದ ಕೆ.ಎಚ್.ಬಿ.ಕಾಲೋನಿಯ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ಗಾಯತ್ರಿದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್‌ ವತಿಯಿಂದ ಚಂಡಿಕಾ ಮಹಾಯಾಗ, 16ನೇ ವರ್ಷದ ಶನೈಶ್ಚರ ಜಯಂತಿ, 108 ಲೀಟರ್‌ ಕ್ಷೀರಾಭಿಷೇಕ ಮತ್ತು ಕಲ್ಯಾಣ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಸೋಮವಾರದಿಂದ ಪ್ರಾರಂಭಗೊಂಡು ಬುಧವಾರದವರೆಗೂ ಮೂರು ದಿನಗಳ ಕಾಲ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಮಹಾಗಣಪತಿ ಪೂಜೆ, ಚಂಡಿಕಾ ಮಹಾಯಾಗ, ತೈಲಾಭಿಷೇಕ, ಪಂಚಾಮೃತಾಭಿಷೇಕ, ರಥ ಕಳಶಸ್ಥಾಪನೆ, ಜ್ಯೇಷ್ಠಾದೇವಿ, ನೀಳಾದೇವಿ ಸಮೇತ ಶನೈಶ್ಚರಸ್ವಾಮಿಯ ಕಲ್ಯಾಣೋತ್ಸವ, ಸಾಮೂಹಿಲ ಎಳ್ಳು ದೀಪೋತ್ಸವ, ತಿಲಹೋಮ, ಕ್ಷೀರಾಭಿಷೇಕ, ವಿಶೇಷ ಶಾಲ್ಯಾನ್ನ ಅಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ನಡೆಸಲಾಯಿತು. ರಥದ ಮೆರವಣಿಗೆಯಲ್ಲಿ ಭಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕೆ.ಎಚ್.ಬಿ.ಕಾಲೋನಿಯ ರಸ್ತೆಗಳಲ್ಲಿ ರಥವನ್ನು ಎಳೆದರು.
ವಿವಿಧ ದೇವರುಗಳಿಗೆ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿದ್ದು, ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.
ಪ್ರಧಾನ ಅರ್ಚಕ ರಾಮಮೋಹನ್‌ ಶಾಸ್ತ್ರಿ, ಭಾಸ್ಕರ ಸ್ವಾಮಿ, ಮುತ್ತೂರು ಶಿವಗುರು ಶರ್ಮ, ದೇವಾಲಯದ ಕಾರ್ಯಕಾರಿ ಮಂಡಲಿ ಸದಸ್ಯರು ಮತ್ತಿತರರು ಹಾಜರಿದ್ದರು.