ಶಿಡ್ಲಘಟ್ಟದ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ಭಾನುವಾರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೀತಾ ರಾಮಚಂದ್ರರ ತಿರುಕಲ್ಯಾಣೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಜಯನಾಮ ಸಂವತ್ಸರ ಚೈತ್ರ ಮಾಸ ಶುದ್ಧ ಸಪ್ತಮಿ ಭಾನುವಾರ ಬೆಳಿಗ್ಗೆ ಸೀತಾ ರಾಮರಿಗೆ ಸುಪ್ರಭಾತ, ದೇವತಾ ಪ್ರಾರ್ಥನೆ, ಭಗವತ್ ವಾಸುದೇವ ಪುಣ್ಯಾಹ, ಕಲಶಸ್ಥಾಪನೆ, ಪೂಜೆ, ಅವಭೃತ ಸ್ನಾನ, ಅಲಂಕಾರ, ಮಹೋತ್ಸವ ಹೋಮವನ್ನು ನಡೆಸಲಾಯಿತು. ಮಧ್ಯಾಹ್ನ ನಡೆದ ಸ್ವಾಮಿಯವರ ಕಲ್ಯಾಣ ಮಹೋತ್ಸವದಲ್ಲಿ ಅಷ್ಟೋತ್ತರ, ಅಷ್ಟಾವಧಾನ ಸೇವೆ, ಮಂಗಳರಾಗಾಲಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಪ್ರಧಾನ ಅರ್ಚಕ ಸತ್ಯಪ್ರಕಾಶ್ ಹಾಗೂ ಶ್ರೀರಾಮ ಭಜನೆ ಮಂದಿರದ ಕಾರ್ಯಕಾರಿ ಸಮಿತಿ ಹಾಗೂ ಭಕ್ತಮಂಡಳಿ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -