ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿರುವ ಯುವಕ ಯುವತಿಯರಿಗೆ ನಡೆಸಿದ ತಿಳುವಳಿಕೆ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳದ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿದರು.
ವಿವಿಧ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿದ್ದು ಅದಕ್ಕೆ ತಕ್ಕಂತಹ ಪೂರ್ವ ತಯಾರಿಯನ್ನು ಉದ್ಯೋಗಾಕಾಂಕ್ಷಿಗಳು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿರುವ ಕಂಪೆನಿಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗುತ್ತಿದೆ. ಕಂಪೆನಿಗಳು ಬಯಸುವ ವಿವಿಧ ವಿದ್ಯಾರ್ಹತೆಯುಳ್ಳವರು ತಮಗೆ ಅನುಕೂಲವಾದ ಕಂಪೆನಿಗಳ ಸಂದರ್ಶನದಲ್ಲಿ ಭಾಗವಹಿಸಬಹುದು. ಪ್ರತಿಯೊಬ್ಬರೂ ದೃಢೀಕರಿಸಲದ ಅಂಕಪಟ್ಟಿಗಳು, ಹತ್ತು ಭಾವಚಿತ್ರಗಳು, ಮತದಾನದ ಗುರುತಿನ ಚೀಟಿ, ಮುಂತಾದ ದಾಖಲೆಗಳ ಪ್ರತಿಗಳನ್ನು ತರಬೇಕು. ಈಗಾಗಲೇ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸದವರು ಮಾಡಿಸಿ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಉದ್ಯೋಗಾಕಾಂಕ್ಷಿಗಳ ದಾಖಲೆಗಳನ್ನು ಪರಿಶೀಲಿಸಿ, ಅವರ ಅನುಮಾನಗಳನ್ನು ಪರಿಹರಿಸಿ, ಮಾರ್ಗದರ್ಶನ ಮಾಡಿದರು.
ಅಧಿಕಾರಿಗಳಾದ ಮೊಹಮ್ಮದ್ ನಸೀರ್, ಮುದ್ದುಕೃಷ್ಣಶೆಟ್ಟಿ, ಸಂತೋಷ್, ಸತೀಶ್, ಲಲಿತಾ ಹಾಜರಿದ್ದರು.
- Advertisement -
- Advertisement -
- Advertisement -
- Advertisement -