ಎಲ್ಲರಿಗೂ ನಮಸ್ಕಾರ,
ನಮಗೆಲ್ಲರಿಗೂ ತಿಳಿದಿರುವಂತೆ ಇದು ಮುಂಗಾರಿನ ಸಮಯ. ಮುಂಗಾರಿನ ಮಳೆ ಬಿಟ್ಟು ಬಿಡದೆ ಸತತವಾಗಿ ಸುರಿದು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಕೃಷಿ ಚಟುವಟಿಕೆಗಳು ಸರಾಗವಾಗಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಈ ಮುಂಗಾರು ಮಳೆ ಹೆಚ್ಚು ಹೆಚ್ಚು ಕಾಯಿಲೆಗಳಿಗೂ ಕೂಡ ಅನುವು ಮಾಡಿಕೊಡುತ್ತದೆ. ಮುಂಗಾರು ಮಳೆ ಹೆಚ್ಚಾಗುವುದರಿಂದ ಹಲವಾರು ಸಾಂಕ್ರಾಮಿಕ ರೋಗಗಳಿಗೂ ಎಡೆ ಮಾಡಿಕೊಡುತ್ತದೆ.
ಸಾಮಾನ್ಯವಾಗಿ ಬರುವಂತಹ ಎಲ್ಲಾ ಸಾಂಕ್ರಾಮಿಕ ರೋಗಗಳಿಗೆ ಸೊಳ್ಳೆಗಳ ಹೆಚ್ಚುವಿಕೆ ಕಾರಣವಾಗಿರುತ್ತದೆ. ಸೊಳ್ಳೆಗಳು ವಾಹಕವಾಗಿ ಕೆಲಸ ಮಾಡಿ Dengue, Chikungunya, ಮಲೇರಿಯ, ಮೆದುಳು ಜ್ವರದಂತಹ ಅನೇಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ.
ಡೆಂಗೆ (Dengue) ಜ್ವರ ಹೇಗೆ ಬರುತ್ತದೆ ?
ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟೈ (Aedes aegypti) ಎಂಬ ಸೊಳ್ಳೆಯೇ ಡೆಂಗೆ ಜ್ವರಕ್ಕೆ ಕರಣ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಾಗಿದ್ದು ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಈ ಸೊಳ್ಳೆಗಳು ಡೆಂಗೆ ಜ್ವರಕ್ಕೆ ಕರಣವಾಗುವ Dengue ವೈರಸ್ಸುಗಳನ್ನು ದೇಹಕ್ಕೆ ರವಾನಿಸಿ ಜ್ವರ ಹರಡಲು ಕಾರಣವಾಗುತ್ತವೆ.
Dengue ಜ್ವರದಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಹೀಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿರುತ್ತದೆ.
ಹಂತಗಳು :
ವಿಶೇಷವಾಗಿ Dengue ಜ್ವರವನ್ನು ಮೂರು ಹಂತಗಳು ವಿಂಗಡಿಸಬಹುದು
- ಸಾಮಾನ್ಯ ಜ್ವರ
- Hemorrhagic fever
- Coma
ರೋಗಲಕ್ಷಣಗಳು :
- ಸಾಮಾನ್ಯ ಜ್ವರ – ಸುಸ್ತು, ಜ್ವರ, ವಾಂತಿ, ಸಂದಿ ನೋವು, ತಲೆನೋವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
- Hemorrhagic fever – Platelet (Thrombocytes)ಗಳ ಪ್ರಮಾಣ ಕಡಿಮೆ ಆಗುವುದರಿಂದ ಬಾಯಿ, ವಸಡು, ಮೂಗಿನಿಂದ ರಕ್ತಸ್ರಾವವಾಗುತ್ತದೆ.
- Coma – ಜ್ವರಕ್ಕೆ ಸೂಕ್ತ ರೀತಿಯ ಚಿಕಿತ್ಸೆ ಲಭಿಸದಿದ್ದಲ್ಲಿ ಕೋಮಾ ಸ್ಥಿತಿಗೆ ತಲುಪಿ ಪ್ರಾಣಾಪಾಯಕ್ಕೆ ಕಾರಣವಾಗುತ್ತದೆ.
ರೋಗಲಕ್ಷಣಗಳು ಕಾಣಿಸಿಕೊಂಡಾಗ ಏನು ಮಾಡಬೇಕು?
ನಿಮ್ಮಲ್ಲಿ ಈ ಮೇಲೆ ವಿವರಿಸಿದ ಲಕ್ಷಣಗಳು ಕಂಡುಬಂದಲ್ಲಿ ಆದಷ್ಟು ಬೇಗ ಹತ್ತಿರದ ಆಸ್ಪತ್ರೆ/ ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು.
Prevention is Better Than Cure ಎಂಬಂತೆ ರೋಗ ಬರುವುದಕ್ಕಿಂತ ಅದನ್ನು ತಡೆಗಟ್ಟುವುದು ಉತ್ತಮ. ಆದ್ದರಿಂದ, ನಾವು ಖಾಯಿಲೆ ಬಾರದ ಹಾಗೆ ತಡೆಯಬಹುದು
- ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಬೆಳೆಯುತ್ತವೆ. ಮೊಟ್ಟೆಗಳನ್ನಿಟ್ಟು ತಮ್ಮ ಸಂತಾನೋತ್ಪತ್ತಿಯನ್ನು ಮಾಡುತ್ತವೆ ಆದುದರಿಂದ ನಿಮ್ಮ ಮನೆಯ ಸುತ್ತಮುತ್ತಲಿನಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳುವುದು.
- ಮನೆಯ ಪಾತ್ರೆ, ಹೋಂಡ, ನೀರಿನ ತೊಟ್ಟಿಗಳನ್ನು ವಾರಕ್ಕೊಂದು ಬಾರಿ ಸರಿಯಾದ ರೀತಿಯಲ್ಲಿ ತೊಳೆಯಬೇಕು.
- ಲಾರ್ವಾ ಗಳು ಕಾಣಿಸಿಕೊಂಡಲ್ಲಿ ನಿಮ್ಮ ಹತ್ತಿರದ ಅರೋಗ್ಯ ಕಾರ್ಯಕರ್ತರಿಗೆ ತಿಳಿಸುವುದು. ಇದರಿಂದ ಅರೋಗ್ಯ ಕಾರ್ಯಕರ್ತರು ನಿಮ್ಮ ಸ್ಥಳಕ್ಕೆ ಭೇಟಿ ನೀಡಿ ಗಂಬೂಸಿಯೆ ಜಾತಿಗೆ ಸೇರಿದ ಮೀನುಗಳನ್ನು ನೀರು ಶೇಖರಿಸುವ ಹೊಂಡದಲ್ಲಿ ಬಿಡುತ್ತಾರೆ. ಅವುಗಳು ಎಲ್ಲಾ ರೀತಿಯ ಲಾರ್ವಾಗಳನ್ನು ತಿಂದು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುತ್ತವೆ.
- ವೈಯಕ್ತಿಕ ಸ್ವಚ್ಛತೆ – ನಿಮ್ಮ ಹಾಗೂ ನಿಮ್ಮ ಮನೆಯ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಸೊಳ್ಳೆಗಳು ಕಡಿಮೆಯಾಗುತ್ತವೆ.
- ಮಿತವಾದ ಆಹಾರ – ನಿಮ್ಮ ಅರೋಗ್ಯ ನಿಮ್ಮ ಆಹಾರ, ವಿಹಾರದ ಮೇಲೆ ನಿರ್ಧಾರವಾಗಿರುತ್ತದೆ ಆದುದರಿಂದ ಆಯಾ ಋತು, ಕಾಲಕ್ಕೆ ಅನುಸಾರವಾಗಿ ಆಹಾರ, ವಿಹಾರವನ್ನು ಅನುಸರಿಸಿದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ರೋಗ-ರುಜಿನಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.
ಧನ್ಯವಾದಗಳು,
Dr. Guru S M
Urban Health Centre Medical Officer
Sidlaghatta
6360950251
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi