ಹಬ್ಬಗಳೆಂದರೆ ನಮ್ಮ ನಿತ್ಯಜೀವನಕ್ಕೆ ಮೆರುಗು ಕೊಡುವ ವಿಶೇಷ ಆಚರಣೆಯ ದಿನ. ಹಬ್ಬಗಳಿಗೆ ಪೌರಾಣಿಕ ಐತಿಹಾಸಿಕ ಸಂಬಂಧಗಳಿವೆ. ಈ ಹಬ್ಬಗಳಿಂದ ನಮ್ಮ ನಿತ್ಯ ಜೀವನದ ಏಕತಾನತೆಯು ದೂರವಾಗುತ್ತದೆ ಹಾಗೂ ಪ್ರಾಕೃತಿಕವಾಗಿ ನಮ್ಮ ಆರೋಗ್ಯಕ್ಕೆ ಈ ಹಬ್ಬಗಳು ಪೂರಕವಾಗುತ್ತವೆ.
1. ವಿವಿಧ ಧರ್ಮಗಳಿಗೆ ಅನುಸಾರವಾಗಿ ನಾವು ವಿವಿಧ ಹಬ್ಬಗಳನ್ನು ಆಚರಿಸುತ್ತೇವೆ. ಹಿಂದೂಗಳಿಗೆ ದಸರಾ, ದೀಪಾವಳಿ, ಯುಗಾದಿ, ಗಣೇಶ ಚತುರ್ಥಿ ಮೊದಲಾದವು ಮುಖ್ಯ ಹಬ್ಬಗಳು. ಕ್ರೈಸ್ತ ಬಾಂಧವರಿಗೆ ಕ್ರಿಸ್‍ಮಸ್, ಗುಡ್ ಫ್ರೈಡೇ ಮೊದಲಾದುವು: ಮುಸಲ್ಮಾನ ಮಿತ್ರರಿಗೆ ರಂಜಾನ್, ಬಕ್ರೀದ್, ಈದ್-ಮಿಲಾದ್ ಮೊದಲಾದ ಹಬ್ಬಗಳು ಮುಖ್ಯವಾದುವು.
2. ‘ದೇವರು’ ಎಂಬುದು ಪರಿಪೂರ್ಣ ರೂಪ. ಅಂತಹ ದೇವರನ್ನು ವಿಶೇಷ ರೀತಿಯಲ್ಲಿ ಪೂಜಿಸುವುದೇ ಹಬ್ಬದ ವಿಶೇಷ. ಈ ಕ್ರಮಗಳು ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸುವುದಕ್ಕೆ ಪೂರಕವಾದುವು.
3. ಹಬ್ಬಗಳು ಬಂಧು-ಮಿತ್ರರ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತವೆ.
4. ಹಬ್ಬದ ಅಂಗವಾಗಿ ತಯಾರಿಸುವ ವಿಶೇಷ ಅಡುಗೆಗಳೂ ಕೂಡ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು ನಮಗೆ ಆರೋಗ್ಯವನ್ನು ಕೊಡುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ.
5. ಹಬ್ಬದ ಸಂದರ್ಭದಲ್ಲಿ ಆಡುವ ವಿವಿಧ ಆಟಗಳು ಮನಸ್ಸಿಗೆ ಸಂತೋಷವನ್ನು ನೀಡುತ್ತವೆ.
6. ಹಬ್ಬಗಳಲ್ಲಿ ನಾವು ಆಹಾರ, ವಸ್ತ್ರ (ಬಟ್ಟೆ), ಉಡುಗೊರೆಗಳನ್ನು ಬೇಕಾದವರಿಗೆ ವಿನಿಮಯ ಮಾಡಿಕೊಳ್ಳುತೇವೆ. ಇದರಿಂದ ನೀಡುವವರಿಗೆ ಹಾಗೂ ಸ್ವೀಕರಿಸುವವರಿಗೆ ಸಂತೋಷವು ದೊರೆಯುತ್ತದೆ.
7. ಹಬ್ಬಗಳಲ್ಲಿ ಮಾಡುವ ಹೂವಿನ ಅಲಂಕಾರ, ವಿವಿಧ ರಂಗೋಲಿಗಳು ಮನಸ್ಸಿಗೆ ಮುದವನ್ನು ನೀಡುತ್ತವೆ. ಕಲೆಗಳನ್ನು ಕಲಿಯಲೂ ಹಬ್ಬಗಳು ಸಹಕಾರಿ.
8. ಮನೋವಿಕಾಸವನ್ನು ಹೊಂದಲು, ದೈಹಿಕ ಮತ್ತು ಮಾನಸಿಕ ಆರೋಗ್ಯಗಳನ್ನು ಪಡೆಯಲು ಸಮಾಜದಲ್ಲಿ ಉತ್ತಮ ಸಂಪರ್ಕದಲ್ಲಿ ಇರಲು, ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ಹಬ್ಬಗಳು ಸಹಕಾರಿ.
ಡಾ. ಶ್ರೀವತ್ಸ
- Advertisement -
- Advertisement -
- Advertisement -
- Advertisement -