ನಗರದ ಕುಚ್ಚಣ್ಣ ಬೀದಿಯ ಒಂದೇ ಕುಟುಂಬದ ಮೂವರಿಗೆ, ಕದಿರಿಪಾಳ್ಯದ ದಂಪತಿಗೆ, ತಾಲ್ಲೂಕಿನ ಜಂಗಮಕೋಟೆಯ 14 ವರ್ಷದ ಬಾಲಕನಿಗೆ, ಜಂಗಮಕೋಟೆ ಕ್ರಾಸ್ ನ 24 ವರ್ಷದ ಗರ್ಭಿಣಿಗೆ, ನಡಿಪಿನಾಯಕನಹಳ್ಳಿಯ 30 ವರ್ಷದ ಗರ್ಭಿಣಿಗೆ, ಬುಸ್ನಳ್ಳಿಯ 35 ವರ್ಷದ ಗಂಡಸು ಮತ್ತು 28 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ.
ಆರೋಗ್ಯ ಸಿಬ್ಬಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿದ್ದಾರೆ. ಸೋಂಕಿತರು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಸೂಕ್ಷ್ಮಾಣು ನಾಶಕವನ್ನು ಸಿಂಪಡಣೆ ಮಾಡಿಸಿದ್ದಾರೆ.