ಅಂಗನವಾಡಿ ನೌಕರನ್ನು ಖಾಯಂಗೊಳಿಸಬೇಕು, 21 ಸಾವಿರ ಕನಿಷ್ಟ ವೇತನ, 10 ಸಾವಿರ ನಿವೃತ್ತಿ ವೇತನವನ್ನು ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸುವುದು, ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಕಡ್ಡಾಗೊಳಿಸುವುದು, ಮಕ್ಕಳ ಬಾಲ್ಯವಸ್ಥೆ ಪಾಲನೆ, ಶಿಕ್ಷಣ ಉಚಿತವಾಗಿ ಕೇಂದ್ರಗಳಲ್ಲಿ ಒದಗಿಸಲು ಶಾಸನವನ್ನು ರೂಪಿಸುವುದು, ಐಸಿಡಿಎಸ್ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ, ಎನ್‌ಪಿಎಸ್ ರದ್ದುಗೊಳಿಸಿ ಹಿಂದಿನ ಪಿಂಚಣಿ ಯೋಜನೆ ಜಾರಿಗೊಳಿಸುವುದು, ಸೇವಾ ಜೇಷ್ಟತಾ ಆಧಾರದಲ್ಲಿ ವೇತನ ನಿಗಧಿಗೊಳಿಸಲು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿ, ಜಿಲ್ಲೆಯ 255 ಕಾರ್ಯಕರ್ತೆಯರು, ಸಹಾಯಕರಿಗೆ ಎನ್‌ಪಿಎಸ್ ಕಾರ್ಡ್ ವಿತರಣೆ, ಶಿಡ್ಲಘಟ್ಟದಲ್ಲಿ ಕಾರ್ಯಕರ್ತೆಯರ ಆಯ್ಕೆಯಲ್ಲಿ ಲೋಪಗಳು ನಡೆದಿರುವ ಕುರಿತು ಇರುವ ಶಂಕೆಯಿದ್ದು ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಿರುವ ವಸ್ತುಗಳನ್ನು ಸಕಾಲದಲ್ಲಿ ವಿತರಿಸಬೇಕು, 3 ತಿಂಗಳಿಗೊಮ್ಮೆ ಕುಂದು ಕೊರತೆಗಳ ಸಭೆ ನಡೆಸುವುದು, ಮುಚ್ಚಿರುವ ಕೇಂದ್ರ ಮರು ಆರಂಭಗೊಳಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರತ್ನಮ್ಮ, ಅಂಗನವಾಡಿ ನೌಕರರಾದ ಕೆ.ಗೀತಾ, ಪಿ.ಎಂ.ಮುನಿರತ್ನಮ್ಮ, ವೆಂಕಟಲಕ್ಷ್ಮೀ, ಸೌಭಾಗ್ಯಮ್ಮ, ಅಶ್ವತ್ಥಮ್ಮ, ಸುಜಾತ. ಪಧ್ಮಾವತಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -