2019-20 ನೇ ಸಾಲಿನ NTSE ಪರೀಕ್ಷೆ (ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ) 10 ನೇ ತರಗತಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಹಾಗೂ NMMS ಪರೀಕ್ಷೆ (ನ್ಯಾಷನಲ್ ಮಿನ್ಸ್ – ಕಮ್ – ಮೇರಿಟ್ ಸ್ಕಾಲರ್ಷಿಪ್ ಪರೀಕ್ಷೆ) 8 ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗಾಗಿ ದಿನಾಂಕ: 24/01/2021 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಈ ಸಂಬಂಧ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ NTSE ಮತ್ತು NMMS ಪರೀಕ್ಷೆಗೆ http://kseeb.kar.nic.in/ ವೆಬ್ ಸೈಟ್ ನಲ್ಲಿ ತಮ್ಮ ಶಾಲೆಯ UDISE ಮೂಲಕ ಮುಖ್ಯ ಶಿಕ್ಷಕರು Login ಅಗಿ ವಿದ್ಯಾರ್ಥಿಗಳ ಅರ್ಜಿಗಳನ್ನು ದಿನಾಂಕ 30/11/2020ರ ಒಳಗೆ ಸಲ್ಲಿಸಲು ಮಂಡಳಿಯ ಪ್ರಕಟಣೆ ತಿಳಿಸಿದೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಪಾವತಿ ಮತ್ತು ಇತರೆ ಎಲ್ಲಾ ಮಾಹಿತಿಯು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. NTSE ಮತ್ತು NMMS ಪರೀಕ್ಷೆಗೆ ಸಂಬಂಧಿಸಿದಂತೆ ತಾಲ್ಲೂಕು ಹಂತದಲ್ಲಿ ತಮ್ಮ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಹಂತದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಉಪನಿರ್ದೇಶಕರ ಕಛೇರಿ ಚಿಕ್ಕಬಳ್ಳಾಪುರ ಇಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -
- Advertisement -
- Advertisement -
- Advertisement -