ಜಮೀನು ಅಥವಾ ತೋಟದಲ್ಲಿ ಅತಿಯಾಗಿ ತಗ್ಗು ಇದ್ದು ಎತೇಚ್ಛವಾಗಿ ನೀರು ನಿಂತು ಜೌಗು/ ಸೀತವಾದಲ್ಲಿ, ಆ ಜಾಗದಲ್ಲಿ ಬೆಳೆ ,ಗಿಡ-ಮರಗಳ ಬೆಳವಣಿಗೆ ಅತಿ ಕಡಿಮೆ.ಅದನ್ನು ಸರಿಪಡಿಸಲಿರುವ ಒಂದು ಶಾಶ್ವತ ದಾರಿಯೆ French Drain . ಸದ್ಯದ ಮಟ್ಟಿಗೆ PVC ಪೈಪ್ ಗಳ ದರ ದುಬಾರಿಯಾಗಿದ್ದರೂ, ಈ ಪದ್ಧತಿ ತುಂಬಾ ಉಪಯುಕ್ತವಾಗಿದೆ.
ಫ್ರೆಂಚ್ ಡ್ರೈನ್ ಅಳವಡಿಸುವ ವಿಧಾನ
- ಮೊದಲಿಗೆ ಸಣ್ಣ ಕಾಲುವೆ ತೆಗೆಯಬೇಕು
- ನಂತರ ಕಾಲುವೆಯೊಳಗೆ 4 ಅಂಗುಲ ಅಗಲ 2 ಅಂಗುಲ ಆಳವಾಗಿ ಮಣ್ಣು ತೆಗುದು ಡ್ರೆಸ್ ಮಾಡಿ ಅದರೊಳಗೆ 20mm ಜೆಲ್ಲಿ ಕಲ್ಲನ್ನು ತುಂಬಬೇಕು (ಮರಳು ಮಿಶ್ರಿತ ಮಣ್ಣು ಇದ್ದಲ್ಲಿ ಜೆಲ್ಲಿ ಕಲ್ಲು ಅತ್ಯವಶಕ)
- ನಂತರ 2 ಅಂಗುಲದ ಪೈಪ್ನಲ್ಲಿ ಹನಿ ನೀರಾವರಿ ಪೈಪನ್ನು ಕೊರೆಯುವ ವಿಧಾನದಿಂದ 1.5 ಅಂಗುಲ ಅಂತರವಿಟ್ಟು ರಂಧ್ರಗಳನ್ನು ಅನ್ನು ಕೊರೆಯಬೇಕು.
- ತದನಂತರ ಪೈಪನ್ನು ಜೆಲ್ಲಿ ಕಲ್ಲನ್ನು ಹಾಸಿರುವ ಕಾಲುವೆಯಲ್ಲಿ ರಂಧ್ರಗಳು ಕಾಣುವಂತೆ ಇರಿಸಬೇಕು.
- ಪೈಪಿನ ಮಟ್ಟವನ್ನು ನೀರು ಹರಿಯುವ ದಿಕ್ಕಿನಲ್ಲಿ ಇರಿಸಬೇಕು.
- ತದನಂತರ ಪೈಪಿನ ಮೇಲೆ 2 ಅಂಗುಲ ಜೆಲ್ಲಿ ಕಲ್ಲನ್ನು ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು.
- ಜಮೀನಿನ ಎತ್ತರ ಭಾಗದಲ್ಲಿ ಪೈಪ್ ಅನ್ನು 2 ಅಡಿ ಮೇಲೆ ಎತ್ತಿ ಮುಚ್ಚಳ ಹಾಕಬೇಕು.(ಏನಾದರೂ ಕಸ ಸೇರಿಕೊಂಡು ಪೈಪ್ ಮುಚ್ಚಿದಾಗ ಸ್ವಚ್ಛ ಮಾಡುವ ಉದ್ದೇಶ) ಇದರಿಂದ ಮಣ್ಣಿನ ಅತಿ ಜೌಗು/ಸೀತದ ಅಂಶ ತಡೆಗಟ್ಟಬಹುದು ಹಾಗೂ ಮಣ್ಣಿನ ಸವಕಳಿಯನ್ನು ತಡೆಯಬಹುದು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi